Latest Posts

ಅಫ್ಘಾನಿಸ್ತಾನದ ನಗರಗಳನ್ನು ವಶಪಡಿಸಿಕೊಂಡ ತಾಲಿಬಾನ್

ಕಾಬೂಲ್: ಯುಎಸ್-ನ್ಯಾಟೋ ಮಿಲಿಟರಿ ಪಡೆ ಅಪ್ಘಾನಿಸ್ತಾನದಿಂದ ಹಿಂದೆ ಸರಿಯಲು ಸಿದ್ಧತೆ ನಡೆಸುತ್ತಿರುವಾಗಲೇ ತಾಲಿಬಾನ್ ಉತ್ತರ ಅಫ್ಘಾನಿಸ್ತಾನದ ಆಯಕಟ್ಟಿನ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದೆ. ತಾಲಿಬಾನ್ ಬಡಾಖಾನ್ ಮತ್ತು ಕಂದಹಾರ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿವೆ ಎಂದು ಅಂತರಾಷ್ಟೀಯ ಮಾಧ್ಯಮಗಳು ವರದಿಯನ್ನು ಪ್ರಕಟಿಸಿವೆ.

ಸೋತ ಅಫ್ಘಾನ್ ಸೈನ್ಯ ತಜಕಿಸ್ತಾನದಲ್ಲಿ ಆಶ್ರಯ ಪಡೆದಿದ್ದು,300 ಕ್ಕೂ ಹೆಚ್ಚು ಸೈನಿಕರು ಬಡಾಖಾನ್ ಗಡಿಯನ್ನು ದಾಟಿ ತಜಕಿಸ್ತಾನಕ್ಕೆ ಪ್ರವೇಶಿಸಿದೆ.ಮಾನವೀಯ ಆಧಾರದ ಮೇಲೆ ಅಪ್ಘಾನ್ ಸೈನಿಕರಿಗೆ ಗಡಿ ದಾಟಲು ಅವಕಾಶ ಮಾಡಿಕೊಟ್ಟಿದೆ ಎಂದು ತಜಿಕಿಸ್ತಾನ್ ಹೇಳಿದೆ. ಪ್ರಸ್ತುತ ಅಫ್ಘಾನಿಸ್ತಾನದ 421 ಜಿಲ್ಲೆಗಳು ತಾಲಿಬಾನ್ ಕೈವಶವಿದೆ.

Share this on:
error: Content is protected !!