ವಾಷಿಂಗ್ಟನ್, ಡಿಸಿ: ಜನವರಿ 6 ರಂದು ಯು.ಎಸ್. ಕ್ಯಾಪಿಟಲ್ ಮೇಲೆ ದಾಳಿ ನಡೆಸಿ ಆಕ್ರಮಣ ನಡೆಸಿದವರನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.ಫಾಕ್ಸ್ ನ್ಯೂಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.ಯುಎಸ್ ನಲ್ಲಿ ನಡೆದ ಹಿಂಸಾಚಾರವನ್ನು ದೇಶಪ್ರೇಮಿಗಳು ಅವರ ಪ್ರೀತಿ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ಜನವರಿ 6 ರಂದು ಟ್ರಂಪ್ ಭಾಷಣ ಮಾಡಿದ ನಂತರ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲು ಕಾಂಗ್ರೆಸ್ ಸಭೆ ಸೇರುತ್ತಿದ್ದ ಸಮಯದಲ್ಲಿ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್ಗೆ ನುಗ್ಗಿ ದಾಂಧಲೆ ನಡೆಸಿದ್ದರು.
ಹಿಂಸಾಚಾರ ನಡೆಸಿದವರನ್ನು ದೇಶಭಕ್ತರು ಮತ್ತು ಶಾಂತಿ ಪ್ರಿಯರು ಎಂದು ಟ್ರಂಪ್ ಬಣ್ಣಿಸಿದರು.ಈ ಪ್ರಕರಣದಲ್ಲಿ ನೂರಾರು ಜನರನ್ನು ಬಂಧಿಸಲಾಗಿತ್ತು,ಐವರು ಕೊಲ್ಲಲ್ಪಟ್ಟರು. ಯು.ಎಸ್. ಹೌಸ್ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ನಿರ್ಧರಿಸಿತು, ಆದರೆ ರಿಪಬ್ಲಿಕನ್ನರ ತೀವ್ರ ವಿರೋಧದಿಂದಾಗಿ ಸೆನೆಟ್ನಲ್ಲಿ ದೋಷಾರೋಪಣೆ ನಿರ್ಣಯವು ವಿಫಲವಾಯಿತು.