ಹೊಸದಿಲ್ಲಿ: ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತ ಮನಸ್ಸು ತೆರೆಯಲು ನಿರಾಕರಿಸಿದೆ.
ತಾಲಿಬಾನ್ ಜೊತೆ ಭಾರತ ಯಾವ ರೀತಿಯ ಸಂಬಂಧವನ್ನು ಹೊಂದಿದೆ ಎಂದು ಕೇಳಿದಾಗ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳುತ್ತಾರೆ ” ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪುನರುಚ್ಚರಿಸಿದರು.
ತಾಲಿಬಾನ್ ನಾಯಕತ್ವವನ್ನು ಹೇಗೆ ನೋಡುತ್ತೀರಾ ಮತ್ತು ಅವರೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂಬ ಮಾಧ್ಯಮದ ಪ್ರಶ್ನೆಗೆ ಜೈಶಂಕರ್ ಈ ರೀತಿ ಪ್ರತಿಕ್ರಿಯಿಸಿದರು….
” ಈಗಿನ ಪರಿಸ್ಥಿತಿ ಹಿಂದಿನಂತೆಯೇ ಇದೆ. ಭಾರತವು ತಾಲಿಬಾನ್ ನೊಂದಿಗೆ ಸಂಪರ್ಕ ಹೊಂದಿದೆಯೋ ಇಲ್ಲವೋ ಎಂಬುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ “” ಎಂದು ಹೇಳಿದರು.
“ಪ್ರಸ್ತುತ ಅಫ್ಘಾನಿಸ್ಥಾನದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ತರಿಸುವುದು ಮೊದಲ ಆದ್ಯತೆಯಾಗಿದೆ” ಎಂದು ಕೂಡ ಹೇಳಿದ್ದಾರೆ.
ತಾಲಿಬಾನ್ ಮತ್ತು ಅವರ ಪ್ರತಿನಿಧಿಗಳು ಕಾಬೂಲ್ಗೆ ತಲುಪಿದ್ದಾರೆ . ಇಂದಿನಿಂದ ಅವರ ಒಡನಾಟವನ್ನು ಮೇಲ್ವಿಚಾರಣೆ ಮಾಡಬೇಕಾಗಿದೆ. ಅಫ್ಘಾನಿಸ್ತಾನದ ಜನರೊಂದಿಗಿನ ಭಾರತದ ಐತಿಹಾಸಿಕ ಸಂಬಂಧ ಹಾಗೆಯೇ ಮುಂದುವರಿಯುತ್ತದೆ. ಮುಂಬರುವ ದಿನಗಳ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. “ಇದು ಕೇವಲ ಆರಂಭ,” ಮಾತ್ರ ಎಂದು ಜೈಶಂಕರ್ ಹೇಳಿದರು.
ತಾಲಿಬಾನ್ ವಿಷಯದಲ್ಲಿ ಭಾರತ ಮೌನ
