ಮುಂಡೋಳೆ: ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮವು ಎಸ್ಕೆಎಸ್ಸೆಸ್ಸೆಫ್ ಮುಂಡೋಳೆ ಶಾಖೆಯ ವತಿಯಿಂದ ಮುಂಡೋಳೆ ಮಸೀದಿಯಲ್ಲಿ ಇದೇ ಬರುವ 29ನೇ ತಾರಿಖಿನಂದು ಶನಿವಾರ ಬೆಳಿಗ್ಗೆ 10ರಿಂದ ಸಾಯಂಕಾಲದವರೆಗೆ ನಡೆಯಲಿದೆ.
ಕುಟುಂಬದ ಸದಸ್ಯರ ಹೆಸರಿನಲ್ಲಿ ಪ್ರತ್ಯೇಕ-ಪ್ರತ್ಯೇಕವಾಗಿ ಈ ಕಾರ್ಡ್ ನೋಂದಾಯಿಸಬೇಕಿರುವುದರಿಂದ ಅಗತ್ಯವಿರುವವರು ತಮ್ಮ ಕುಟುಂಬ ಸದಸ್ಯರ ಜೊತೆಗೆ ಪ್ರತಿಯೊಬ್ಬರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತೆಗೆದುಕೊಂಡು ಬರಬೇಕಿದೆ. ಅಲ್ಲದೆ ಕೊರೋನಾ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆಯೋಜಕರು ತಿಳಿಸಿದ್ದಾರೆ.
ಮುಂಡೋಳೆಯ ಆಸುಪಾಸಿನ ಪಟ್ಟೆ, ಕೆಮನಡ್ಕ, ಹೊಸನಗರ, ಪೆರಿಗೇರಿ, ಬಳಕ್ಕ, ಪಾದೆಕರ್ಯ ಅಂಬಟೆಮೂಲೆ ಹಾಗೂ ಸುತ್ತಮುತ್ತಲಿನ ಸರ್ವ ನಾಗರಿಕರಿಗೂ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದ ಎಂದು ಮುಂಡೋಳೆ ಶಾಖೆಯ ಅಧ್ಯಕ್ಷರಾದ ಯೂಸುಫ್ ಎಂ. ತಿಳಿಸಿದ್ದಾರೆ.
ಅಲ್ಲದೆ ಈಗಾಗಲೇ ಟೋಕನ್ ಸಂಖ್ಯೆಯನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, (ದೂ. 8553598745, 8792114898) ಸಂಖ್ಯೆ ಕರೆ ಮಾಡುವಂತೆ ಕೋರಲಾಗಿದೆ.
ಆಯುಷ್ಮಾನ್ ಕಾರ್ಡ್ ನ ಪ್ರಯೋಜನ:
ಬಿಪಿಎಲ್, ಎಪಿಎಲ್ ಹಾಗೂ ಪಡಿತರ ಕಾರ್ಡ ಇಲ್ಲದವರಿಗೂ ಸಹ ಈ ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದೆ. ವಿವಿಧ ಸರಕಾರಿ ನೌಕರರು ಸಹ ಈ ಕಾರ್ಡ್ ಪಡೆಯಬಹುದಾಗಿದ್ದು, ಈ ಕಾರ್ಡ ಮೂಲಕ ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವಾರ್ಷಿಕ 5 ಲಕ್ಷ ರೂಪಾಯಿ ತನಕ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ. 30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿರಲಿದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್ ಶೇ.30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂಪಾಯಿ ಇರುತ್ತದೆ.