Latest Posts

ಕತ್ತಲೆಯಲ್ಲಿದ್ದ ಒಂಟಿ ಮಹಿಳೆಯ ಮನೆಗೆ ಬೆಳಕು ತುಂಬಿ ಮಾನವೀಯತೆ ಮೆರೆದ ವಸಂತ್ ಬೆರ್ನಾಡ್ ತಂಡ

ಹಳೆಯಂಗಡಿ: ಆಗಸ್ಟ್: 27 ಅದ್ದಿ ಬೊಳ್ಳೂರು

ಅಂಗಳದಲ್ಲಿ ಬೆಳೆದ ಹಸಿರು ಹುಲ್ಲು ರಾಸಿಗಳ ಮದ್ಯೆ ಪಾಳು ಬೀಳುವ ಸ್ಥಿತಿಯಲ್ಲಿದ್ದ ಮನೆಯ ಬಾಗಿಲ ಮುಂದೆ ನಿಂತು ಅಸಹಾಯಕತೆಯಿಂದ ಯಾವುದೋ ನಿರೀಕ್ಷೆಯನ್ನು ಹೊತ್ತು ಯೋಚಿಸುವಂತಿತ್ತು ಆ ಮಹಿಳೆಯ ಸ್ಥಿತಿ.

ಹತ್ತಿರ ಹೋಗಿ ಮಾತನಾಡಲು ಹೇಳುತ್ತೆ ಆ ತಾಯಿ, ಕೊರೋನ ಪ್ರಕರಣಗಳ ದಿನದಿಂದ ವಿದ್ಯುತ್ ಬಿಲ್ಲು ಪಾವತಿಸಲಾಗದ ಕಾರಣ ಮೆಸ್ಕಾಂ ನವರು ಮನೆಯ ಮೀಟರು ಸಮೇತ ಸರ್ವಿಸ್ ಲೈನ್ ಕಿತ್ತುಕೊಂಡು ಹೋದ ನಂತರ ಕಳೆದ ಕೆಲವು ಸಮಯಗಳಿಂದ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದೇನೆ ಯಾರಾದರೂ ಸೊಲ್ಪ ಸೀಮೆಎಣ್ಣೆ ನೀಡಿದರೆ ಮನೆಗೆ ದೀಪ ಮತ್ತು ಒಲೆ ಉರಿಸಲು ಸಹಾಯವಾಗುತ್ತಿತ್ತು ಎಂದು ಕಣ್ಣಲ್ಲಿ ನೀರು ಸುರಿಸುತ್ತಾ, ಇದ್ದ ಒಬ್ಬ ಮಗ ಮದುವೆಯಾಗಿ ದೂರವಾದ ಬಳಿಕ ಮನೆಯಲ್ಲಿ ಒಂಟಿಯಾಗಿ ಜೀವನ ದೂಡುತ್ತಿದ್ದೇನೆ ಎಂಬುದಾಗಿತ್ತು ಆ ಮಹಿಳೆಯ ಅಳಲು.

ಇದನ್ನೆಲ್ಲಾ ಆಳಿಸುತ್ತಿದ್ದಂತೆ ಇನ್ನೂಂದು ಕಡೆ ರಾಜಕೀಯ ಪಕ್ಷವೊಂದರ ಗುಂಪೊಂದು (ಕಾಂಗ್ರೇಸ್ ಪಕ್ಷದ ಆರೋಗ್ಯ ಅಭಯ ಹಸ್ತ) ಮನೆಮನೆಗೆ ತೆರಲಿ ಆರೋಗ್ಯ ತಪಾಸಣೆ ಮಾಡುವ ಕಾಯಕದಲ್ಲಿ ತೊಡಗಿದ್ದ ಸದಸ್ಯರ ನಡುವೆ ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮಾಜಿ ಗ್ರಾ.ಪಂ ಸ ಅಝೀಝ್ ಐಎಕೆ ಮತ್ತಿತರನ್ನು ಗಮನಿಸಿದ ನಾನು ತಕ್ಷಣ ಮಹಿಳೆಯ ಸ್ಥಿತಿಯನ್ನು ಅವರ ಗಮನಕ್ಕೆ ತಂದಿದ್ದರಿಂದ ವಸಂತ್ ಬೆರ್ನಾಡ್’ರವರು ಅದೇ ದಿನ ಹತ್ತು ಲೀಟರಿನಷ್ಟು ಸೀಮೆಎಣ್ಣೆ ಕೊಟ್ಟು ಸಹಕರಿಸಿದಲ್ಲದೆ ನೆನ್ನೆ ಆ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿಸಿ ಆ ಒಂಟಿ ಮಹಿಳೆಯ ಮನೆಯಲ್ಲಿ ಬೆಳಕು ಮೂಡಲು ಸಹಾಯ ಮಾಡಿರುತ್ತಾರೆ. ಅಲ್ಲದೆ SKSSF ಇದರ ವಿಕಾಯ ಸಮಿತಿಯ ಸ್ಥಳೀಯ ಸದಸ್ಯರು ಮಹಿಳೆಯ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿರುತ್ತಾರೆ. ಆದ್ದರಿಂದ ವಸಂತ್ ಬೆರ್ನಾಡ್ ಅಝೀಝ್ ಐಎಕೆ, ಜಲಜ ಪಾನರ, ಪದ್ಮಾವತಿ ಶೆಟ್ಟಿ, ಹುಸೇನಬ್ಬ, ಮತ್ತು ಇತರರರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.

Share this on:
error: Content is protected !!