Latest Posts

ಆತೂರಿನಲ್ಲಿ ವಲಯ ಮಟ್ಟದ ತ್ವಲಬಾ ಸಂಗಮ ಹಾಗೂ ಕ್ವಿಝ್ ಸ್ಪರ್ಧೆ

ಉಪ್ಪಿನಂಗಡಿ:ಎಸ್.ಕೆ.ಎಸ್.ಎಸ್.ಎಪ್ ತ್ವಲಬಾವಿಂಗ್ ಉಪ್ಪಿನಂಗಡಿ ವಲಯ ಇದರ ಆಶ್ರಯದಲ್ಲಿ ಹಾಗೂ ಎಸ್.ಕೆ.ಎಸ್.ಎಸ್.ಎಪ್ ಆತೂರು ಶಾಖೆಯ ಸಹಯೋಗದೊಂದಿಗೆ ವಲಯ ಮಟ್ಟದ ತ್ವಲಬಾ ಸಂಗಮ ಹಾಗೂ ಹಿಜ್ರಾ ಹೊಸವರ್ಷದ ಪ್ರಯುಕ್ತ ಕ್ವಿಝ್ ಸ್ಪರ್ಧೆ  ದಿನಾಂಕ 31 ಅಗಸ್ಟ್ 2020 ಸೋಮವಾರದಂದು ಆತೂರಿನ ಬದ್ರಿಯಾ ಹಾಲ್’ನಲ್ಲಿ ನಡೆಯಿತು.

.

ಕಾರ್ಯಕ್ರಮದ ಪ್ರಾರಂಭದಲ್ಲಿ ಮರ್ಹೂಂ ಅಬ್ದುಲ್ಲಾ ಮುಸ್ಲಿಯಾರ್ ರವರ ಕಬರ್ ಝಿಯಾರತ್ ನಡೆಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹು. ಸಯ್ಯಿದ್ ಅನಸ್ ತಂಙಲ್ ಕರುವೇಲು ಪಾರ್ಥನೆ  ನಡೆಸಿದರು. ವಲಯ ತ್ವಲಬಾವಿಂಗ್ ಮೀಡಿಯಾ ಉಸ್ತುವಾರಿ ಶರೀಫ್ ಆತೂರು ಕಿರಾಅತ್ ಪಠಿಸಿದರು. ತ್ವಲಬಾವಿಂಗ್ ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಸಪ್ವಾನ್ ಮಾಪಾಲ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಬಳಿಕ ಬಹು ಸಯ್ಯಿದ್ ಅನಸ್ ತಂಙಳ್ ಕರುವೇಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ SKSSF ಉಪ್ಪಿನಂಗಡಿ ವಲಯ ಬಹು.ಹಾರಿಸ್ ಕೌಸರಿ ಕೋಲ್ಪೆ, SKSSF ತ್ವಲಬಾವಿಂಗ್ ದ.ಕ ಜಿಲ್ಲಾ ಚೇರ್ಮ್ಯಾನ್ ಉವೈಸ್ ತೋಕೆ,  SKSSF ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಕೆ.ಎಂ. ಜಬ್ಬಾರ್ ಮುಸ್ಲಿಯಾರ್ ಕರಾಯ, SKSSF ಉಪ್ಪಿನಂಗಡಿ ವಲಯ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಪೆದಮಲೆ, SKSSF ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ, SKSSFಆತೂರು ಕ್ಲಸ್ಟರ್ ಪ್ರದಾನ ಕಾರ್ಯದರ್ಶಿ ಝಕರಿಯಾ ಮುಸ್ಲಿಯಾರ್,  ಆತೂರು ರೇಂಜ್ ಅಧ್ಯಕ್ಷರಾದ ಫಾಝಿಲ್ ಹನೀಫಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾಪಲ್ಲ ಸವಣೂರು ಮುದರ್ರಿಸರೂ, SKSSF ಉಪ್ಪಿನಂಗಡಿ ವಲಯ ಅಧ್ಯಕ್ಷರೂ ಆದ ಬಹು. ಎಂ.ಎ. ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಉಸ್ತಾದ್ “ಮುತಅಲ್ಲಿಮರ ಜವಬ್ದಾರಿ” ಎಂಬ ವಿಷಯನ್ನಾಧರಿಸಿ ಮುಖ್ಯಭಾಷಣಗೈದರು. ನಂತರದಲ್ಲಿ SKSSF ಟ್ರೆಂಡ್ ದ.ಕ ಜಿಲ್ಲಾ ಚೇರ್ಮ್ಯಾನ್ ಸಮದ್ ಸರ್ ಸಾಲೆತ್ತೂರು ಮೋಟಿವೇಷನ್ ತರಗತಿ ನಡೆಸಿದರು

ಕಾರ್ಯಕ್ರಮದಲ್ಲಿ ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಕೆ. ಅ‌ಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಸಿರಾಜ್ ಬಡ್ಡಮೆ,  ಆತೂರು ರೇಂಜ್ ಕೋಶಾಧಿಕಾರಿ ಅಬ್ದುಲ್ ಅಝೀಝ್ ಕಿಡ್ಸ್, SKSSF ಆತೂರು ಶಾಖೆಯ ಅಧ್ಯಕ್ಷರಾದ  ಬಿ.ಆರ್. ಅಬ್ದುಲ್ ಖಾದರ್, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕರಾದ ಆದಂ ಹಾಜಿ ಪಿಲಿಕುಡೆಲ್, SKSSF ಆತೂರು ತ್ವಲಬಾವಿಂಗ್ ಕನ್ವೀನರ್ ಬದ್ರುದ್ದೀನ್ ಮುಸ್ಲಿಯಾರ್ ಆತೂರು ಸೇರಿದಂತೆ ವಲಯ, ಕ್ಲಸ್ಟರ್, ಶಾಖಾ ನಾಯಕರು ಉಪಸ್ಥಿತಿ ಇದ್ದರು.

SKSSF ತ್ವಲಬಾವಿಂಗ್ ಉಪ್ಪಿನಂಗಡಿ ವಲಯ ವರ್ಕಿಂಗ್ ಕನ್ವೀನರ್ ಮುನವ್ವರ್ ಕರಾಯ ಕಾರ್ಯಕ್ರಮ ನಿರೂಪಿಸಿದರು. ಜನರಲ್ ಕನ್ವೀನರ್ ಅಸ್ಗರಲಿ ತುರ್ಕಳಿಕೆ ವಂದಿಸಿದರು.

Share this on:
error: Content is protected !!