Latest Posts

SKSSF ಸರ್ಗಲಯ ಸುರತ್ಕಲ್ ವಲಯ -2020

ಸುರತ್ಕಲ್ : SKSSF ಸರ್ಗಲಯ ಸುರತ್ಕಲ್ ವಲಯ  ಸಮಿತಿಯು ದ.ಕ ಜಿಲ್ಲಾ ಸರ್ಗಲಯ ಸಮಿತಿಯ ನಿರ್ದೇಶನ ಪ್ರಕಾರ ಆಯೋಜಿಸಿದ ಮೆಹಫಿಲ್-ಎ-ತೇರನಾಮ್ ಇಸ್ಲಾಮಿಕ್ ಹಾಡು ಸ್ಪರ್ಧಾ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ  online ಮೂಲಕ ನಡೆಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಏಳು ಶಾಖೆಗಳ ಹಾಡುಗಾರರು  ಭಾಗವಹಿಸಿದ್ದರು, ಭಾಗವಹಿಸಿದ ಹಾಡುಗಾರರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಬಹು ಮಾನ್ಯರಾದ ಅಬ್ದುರ್ರಝಾಕ್ ಅಝ್ಹರಿ ನಿರೂಪಣೆ ಮಾಡಿದರು.

ಪ್ರಥಮ ಸ್ಥಾನವನ್ನು ಹಳೆಯಂಗಡಿ ಶಾಖೆಯ ಸದಸ್ಯರಾದ ಝೈನುದ್ದಿನ್  ಇಂದಿರಾನಗರ ಹಾಗೂ ದ್ವಿತೀಯ ಸ್ಥಾನವನ್ನು ಇಡ್ಯಾ ಶಾಖೆಯ ಸದಸ್ಯರಾದ ಹಸನ್ ರಾಝಿ ಇವರನ್ನು ಆಯ್ಕೆಮಾಡಲಾಯಿತು.

SKSSF ಸುರತ್ಕಲ್ ವಲಯ ಸರ್ಗಲಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುರತ್ಕಲ್ ವಲಯ ವ್ಯಾಪ್ತಿಗೆ ಒಳಪಟ್ಟ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಕೆಳಗೆ ಪ್ರವರ್ತಿಸುವ ಮದ್ರಸ ವಿದ್ಯಾರ್ಥಿಗೆ ನಡೆಸಿದ್ದ ಭಾರತದ ನಕ್ಷೆ ಬಿಡಿಸುವ ಚಿತ್ರ ಕಲಾ ಸ್ಪರ್ಧೆಯು ಆನ್ಲೈನ್ ಮೂಲಕ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ 25ಕ್ಕೂ ಅಧಿಕಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು,
ಕಾರ್ಯಕ್ರಮದ ನಿರೂಪಣೆ ಯನ್ನು ಬದ್ರುದ್ದೀನ್ ಫೈಝಿ ಕಡಬ ನಿರ್ವಹಿಸಿದರು.
ಪ್ರಥಮ ಸ್ಥಾನವನ್ನು ಅಲ್ ಮದ್ರಸತುಲ್-ಅಝೀಝಿಯ್ಯಾ ಮದ್ರಸ ಚೊಕ್ಕಬೆಟ್ಟು ಮದ್ರಸ ವಿದ್ಯಾರ್ಥಿ ಶುಝ್ನಾ ಹಾಗೂ ದ್ವಿತೀಯ ಸ್ಥಾನವನ್ನು ಅರೇಬಿಕ್ ಮದ್ರಸ ಬೊಳ್ಳೂರು ವಿದ್ಯಾರ್ಥಿ ನಫೀಸತುಲ್ ಮಿಸ್ರಿಯ್ಯಾ ಇವರನ್ನು ಆರಿಸಲಾಯಿತು.

Share this on:
error: Content is protected !!