Latest Posts

ಬಡಗನ್ನೂರಿನಲ್ಲಿ ಎಸ್.ಕೆ.ಎಸ್.ಎಸ್.ಫ್. ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೊಂದಣಿ, ವಿತರಣೆ.

ಪುತ್ತೂರು: ಎಸ್.ಕೆ.ಎಸ್.ಎಸ್.ಫ್. ಈಶ್ವರಮಂಗಳ ಕ್ಲಸ್ಟರ್ ಹಾಗೂ ಎಸ್.ಕೆ.ಎಸ್.ಎಸ್.ಫ್. ಮೈಂದನಡ್ಕ ಯುನಿಟ್ ಇದರ ಸಹಯೋಗದಲ್ಲಿ 2 ಹಂತವಾಗಿ ಆಗಸ್ಟ್ 31ರಂದು ಸುಳ್ಯಪದವು ಹಾಗೂ ಸೆಪ್ಟಂಬರ್ 02ರಂದು  ಮೈಂದನಡ್ಕದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೊಂದಣಿ, ವಿತರಣಾ ಕಾರ್ಯಕ್ರಮ  ನಡೆಯಿತು.

ಕೃಷ್ಣ ರೈ ಕುದ್ಕಾಡಿ ಉದ್ಘಾಟಿಸಿ, ಶುಭ ಹಾರೈಸಿದರು. ಊರಿನ ಸುಮಾರು 400ಕ್ಕೂ ಹೆಚ್ಚು ಮಂದಿಗೆ  ಆಯುಷ್ಮಾನ್ ಕಾರ್ಡ್ ಸೌಲಭ್ಯ ಒದಗಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಮಹಮ್ಮದ್ ಬಡಗನ್ನೂರು, ರಾಕೇಶ್ ರೈ ಕುದ್ಕಾಡಿ,ಗುರುಪ್ರಸಾದ್ ಕುದ್ಕಾಡಿ, ಗಣೇಶ್  ಭಟ್, ಮನಿತ್ ರೈ ಕುದ್ಕಾಡಿ, ರಾಜೇಶ್, ಪ್ರದೀಪ್ ಪಿ,  ಎಸ್.ಕೆ.ಎಸ್.ಎಸ್.ಫ್. ಮೈಂದನಡ್ಕ ಯುನಿಟ್ ಗೌರವಾದ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಧ್ಯಕ್ಷರಾದ ಸಲಾಂ ಪದಡ್ಕ,ಪ್ರಧಾನ ಕಾರ್ಯದರ್ಶಿ ಲುಖ್ಮಾನುಲ್ ಹಕೀಂ ಫೈಝಿ, ಉಪಾಧ್ಯಕ್ಷರಾದ ಅಬ್ದುಲ್ಲಾ ಬಡಗನ್ನೂರು, ವರ್ಕಿಂಗ್ ಕಾರ್ಯದರ್ಶಿ ಆಬಿದ್ , ಕೋಶಾಧಿಕಾರಿ ಕರೀಂ ಪಿಲ್ಪುಡೆ,ಸಹಚಾರಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೈಂದನಡ್ಕ, ವಿಖಾಯ ಕಾರ್ಯದರ್ಶಿ ಯೂಸುಫ್ ಕಾವುಂಜ, ಟ್ರೆಂಡ್ ಕಾರ್ಯದರ್ಶಿ ಶಾಹುಲ್ ಕಾವುಂಜ, ಸರ್ಗಾಲಯ ಕಾರ್ಯದರ್ಶಿ ಉಬೈದ್ ಕೆ  ಮತ್ತು ಶಾಖೆಯ ಸದಸ್ಯರು ಉಪಸ್ಥಿತರಿದ್ದರು.

Share this on:
error: Content is protected !!