“ಯುವಕರು ಮಾಡುವ ಸಾಮಾಜಿಕ ವಿಚಾರಗಳಿಗೆ ಊರವರ ಸಹಕಾರ ಅತ್ಯಗತ್ಯವಾಗಿದೆ ವಿಟ್ಲ ಎಸ್ ಐ ವಿನೋದ್ ರೆಡ್ಡಿ“
ಪುಣಚ:- ಅಜ್ಜಿನಡ್ಕ ರೋಶ್ನಿ ಕಟ್ಟಡದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರ ನೂತನ ಹೆಲ್ಪ್ ಲೈನ್ ಸೇವಾ ಕೇಂದ್ರವನ್ನು ಇತ್ತೀಚೆಗೆ ವಿಟ್ಲ ಎಸ್ ಐ ವಿನೋದ್ ರೆಡ್ಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಶೇಷತೆ ಮೆರೆದ ಎಸ್ ಐ ವಿನೋದ್ ರೆಡ್ಡಿಯವರು ಕಾರ್ಯಕ್ರಮಕ್ಕೆ ಬಂದಿದ್ದ ಪುಟಾಣಿ ಮಗುವಿನ ಮೂಲಕ ರಿಬ್ಬನ್ ಕತ್ತರಿಸುವ ಮೂಲಕ ಮಾದರಿಯಾದರು
ಉದ್ಘಾಟನೆ ನೇರವೇರಿಸಿ ಮಾತನಾಡಿದ ವಿಟ್ಲ ಎಸ್ ಐ ಅವರು ಪುಣಚ ಗ್ರಾಮ ಶಾಂತಿ ಸೌಹರ್ದತೆಗೆ ಹೆಸರುವಾಸಿಯಾಗಿದೆ.
ಇಲ್ಲಿನ ಯುವಕರು ಒಳ್ಳೆಯ ಅಲೋಚನೆ ಮಾಡಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮಾಡುತ್ತಿರುವ ಸಮಾಜ ಸೇವೆ ಶಾಘ್ಲನೀಯವಾಗಿದೆ.
ಜೊತೆಗೆ ಹೆಲ್ಪ್ ಲೈನ್ ಸೇವಾ ಕೇಂದ್ರವು ಜನಸಾಮಾನ್ಯರಿಗೆ ಜನಸ್ನೇಹಿಯಾಗಿ ಗುರುತಿಸುವಂತಾಗಲಿ ಎಂದರು
ಕಾರ್ಯಕ್ರಮದ ದುಹಾಶಿರ್ವಚನವನ್ನು ಅಜ್ಜಿನಡ್ಕ ಬಿಲಾಲ್ ಮಸೀದಿಯ ಧರ್ಮ ಗುರುಗಳಾದ ಗೌರವಾನ್ವಿತ ಉಮರುಲ್ ಫಾರೋಕ್ ಹನೀಫಿ , ಪಾಡಿ ಎಜುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಪಿ ಪಾಡಿ, ನೀರ್ಕಜೆ ಖತೀಬರಾದ ಗೌರವಾನ್ವಿತ ನಝೀರ್ ಸಹದಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಶ್ರೀಧರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಉದಯಕುಮಾರ್ ದಂಬೆ, ನಾರಾಯಣ ನಾಯ್ಕ ಪಟಿಕಲ್ಲು, ಸಿರಾಜ್ ಮಣಿಲ, ಪೋಲಿಸ್ ಅಧಿಕಾರಿಗಳಾದ ಹೇಮರಾಜು, ಮದು , ಪ್ರತಾಫ್ ,
ಸಾಮಾಜಿಕ ಮುಖಂಡರಾದ ಶರತ್ ವಿಟ್ಲ, ಜಲಾಲಿಯಾ ಸಮಿತಿಯ ಅಧ್ಯಕ್ಷರಾದ ಪಕ್ರುದ್ದೀನ್ ಹಾಜಿ ಪಟಿಕಲ್ಲು, ಕಟ್ಟಡ ಮಾಲಕರಾದ ವಿಶ್ವನಾಥ ಪೂಜಾರಿ, ಹರ್ಷಿತಾ ಸ್ಟುಡಿಯೋ ಮಾಲಕ ಹರೀಶ್ ಪುಣಚ , ಮೊದಲಾವರು ಭಾಗವಹಿಸಿದರು
ಸಂಸ್ಥೆಯ ಮಾಲಕ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಸ್ವಾಗತಿಸಿ ವಂದಿಸಿದರು