Latest Posts

ತ್ವಲಬಾ ವಿಂಗ್ ವತಿಯಿಂದ ಮುಹರ್ರಂ ಫೆಸ್ಟ್

ಸೆ.08 ಕಡಬ: SKSSF ತ್ವಲಬಾ ವಿಂಗ್ ಕಡಬ ಶಾಖೆ ವತಿಯಿಂದ ಮುನಾಫಸ-20 ಮುಹರ್ರಂ ಫೆಸ್ಟ್ ಕಾರ್ಯಕ್ರಮ ಮುಈನುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಆರಂಭದಲ್ಲಿ ಹಾಫಿಲ್ ಮುಹಮ್ಮದ್ ಹಾಷಿರ್ ಕಿರಾಅತ್ ಪಠಿಸಿದಾಗ SKSSF ತ್ವಲಬಾ ವಿಂಗ್ ಕಡಬ ಶಾಖೆ ಇದರ ಅಧ್ಯಕ್ಷರಾದ ಸ್ವಗೀರ್ ಎಲ್ಲರನ್ನೂ ಸ್ವಾಗತಿಸಿದರು. SKSSF ಕಡಬ ಶಾಖೆ ಇದರ ಅಧ್ಯಕ್ಷರಾದ ಉಸ್ತಾದ್ ಬದ್ರುದ್ದೀನ್ ಮುಸ್ಲಿಯಾರ್ ಕಡಬ ಅಧ್ಯಕ್ಷತೆ ವಹಿಸಿದರೆ, ರಹ್ಮಾನಿಯ ಜುಮಾ ಮಸೀದಿ ಕಡಬ ಇದರ ಖತೀಬರೂ ಹಿರಿಯ ವಿದ್ವಾಂಸರು ಆದ ಅಲ್ ಹಾಜ್ ಇಬ್ರಾಹಿಮ್ ದಾರಿಮಿ ಕಡಬ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ SKSSF ತ್ವಲಬಾ ವಿಂಗ್ ದ.ಕ ಜಿಲ್ಲೆ ಇದರ ಅಧ್ಯಕ್ಷರಾದ ಉವೈಸ್ ತೋಕೆ ಪ್ರಾಸ್ತಾವಿಕ ಭಾಷಣ ಮಾಡಿ ನಂತರ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಿತು.ಕಡಬ ವಲಯದ 5 ಶಾಖೆಗಳು ಜಿದ್ದ ಜಿದ್ದಿನ ಹೋರಾಟ ನಡೆಸಿ ಮುನಾಫಸ-20 ಮುಹರ್ರಂ ಫೆಸ್ಟ್ ಕಾರ್ಯಕ್ರಮದಲ್ಲಿ ತ್ವಲಬಾ ವಿಂಗ್ ಕಡಬ ಶಾಖೆ ಪ್ರಥಮ ಸ್ಥಾನ ಪಡೆದರು ಹಾಗೂ ಪನ್ಯ ಮತ್ತು ಕೋರುಂದೂರು ಶಾಖೆ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದರು.ಅದೇ ರೀತಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು ಮತ್ತು ಪ್ರಥಮ ಸ್ಥಾನ ತ್ವಲಬಾ ವಿಂಗ್ ಕಡಬ ಶಾಖೆ ತಂಡಕ್ಕೆ ಮತ್ತು ದ್ವಿತೀಯ ಸ್ಥಾನ ಪಡೆದ ಪನ್ಯ ಮತ್ತು ಕೋರುಂದೂರು ಜಂಟಿ ಶಾಖೆ ತಂಡಕ್ಕೆ ಬಹುಮಾನ ವಿತರಣೆ ಮಾಡಲಾಯಿತು.ವೇದಿಕೆಯಲ್ಲಿ ತೀರ್ಪುಗಾರರಾಗಿ ಆಗಮಿಸಿದ ಅಶ್ರಫ್ ಮುಸ್ಲಿಯಾರ್ ನೆಕ್ಕರೆ ಮತ್ತು ಟಿ.ಎಚ್ ಶರೀಫ್ ದಾರಿಮಿ ಕಡಬ ಹಾಗೂ ಗಣ್ಯ ಉಪಸ್ಥಿತಿಯಾಗಿ ಬಶೀರ್ ಮುಸ್ಲಿಯಾರ್ ಕಡಬ,ಇಸ್ಮಾಯಿಲ್ ಮುಸ್ಲಿಯಾರ್ ಕಳಾರ,ಶಂಸುದ್ದೀನ್ ಪನ್ಯ,ಹಮೀದ್ ಹಾಜಿ ಕಡಬ,ಸಯ್ಯದ್ ಕಡಬ,ಕಲೀಮುಲ್ಲಾ ಪನ್ಯ ಮುಂತಾದ ಅನೇಕ ನಾಯಕರು ವೇದಿಕೆಯಲ್ಲಿ ಉಪಸ್ಥಿತಿದ್ದರು.

Share this on:
error: Content is protected !!