ವಿದ್ಯುತ್ ವ್ಯತ್ಯಯ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿ
ಬೋಳಂತೂರು ಗ್ರಾಮದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ ಆಡುತ್ತಿದ್ದು ಜನ ಸಾಮಾನ್ಯರು ಬಹಳ ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡ SDPI ಬೋಳಂತೂರು ಗ್ರಾಮ ಸಮಿತಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿ ಪ್ರಥಮ ಹಂತವಾಗಿ ದಿನಾಂಕ 7/09/2020 ರ ಸೋಮವಾರದಂದು ಕಲ್ಲಡ್ಕ ಜೂನಿಯರ್ ಇಲೆಕ್ಟ್ರಿಕ್ ಇಂಜಿನಿಯರ್ (ಜೆ.ಇ) ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಇದರ ಬಗ್ಗೆ ಪರಿಶೀಲನೆ ಮಾಡಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಜೂನಿಯರ್ ಇಲೆಕ್ಟ್ರಿಕ್ ಇಂಜಿನಿಯರ್ (ಜೆ.ಇ) ಅವರು ಭರವಸೆ ನೀಡಿದರು.
ಮನವಿ ಸಲ್ಲಿಸುವಾಗ SDPI ಬೋಳಂತೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮಹಮ್ಮದ್ B. ಮಾಡದ ಬಳಿ, ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಬೈಲ್ ಮತ್ತು ಸದಸ್ಯರಾದ ಮುಸ್ತಫಾ ಬೋಳಂತೂರು ಉಪಸ್ಥಿತರಿದ್ದರು