Latest Posts

SKSSF ತುಂಬೆ ಶಾಖೆ, MNG ಫೌಂಡೇಶನ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ

ವರದಿ ಅನಸ್ ವಿಟ್ಲ

SKSSF ತುಂಬೆ ಶಾಖೆ, MNG ಫೌಂಡೇಶನ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ

ತುಂಬೆ: SKSSF ತುಂಬೆ ಶಾಖೆ, ಎಮ್ ಎನ್ ಜಿ ಫೌಂಡೇಶನ್ (ರಿ) ಮಂಗಳೂರು ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ ಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ತುಂಬೆಯ ಶಿಲ್ಪಿ ದಿ.ಡಾ ಅಹ್ಮದ್ ಹಾಜಿ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 20 ಸೆಪ್ಟೆಂಬರ್ 2020 ನೇ ಆದಿತ್ಯವಾರದಂದು ತುಂಬೆ ಬಸ್ಸು ನಿಲ್ದಾಣ ಹತ್ತಿರದ ಖುಲ್ಸು ಸೆಂಟರಿನಲ್ಲಿ ಯಶಸ್ವಿಯಾಗಿ ಜರುಗಿತು.

ಸರಕಾರದ ಕೊರೋನ ಸುರಕ್ಷತಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಜರುಗಿದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 47 ಮಂದಿ ರಕ್ತದಾನಿಗಳಾಗಿ ಪಾಲ್ಗೊಂಡರು.
ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ಇದರ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ MJM ತುಂಬೆ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಫೈಝಿ ಅವರು ದುಆ ಆಶಿರ್ವಚನ ನೀಡಿದರು ಮತ್ತು SKSSF ಬಂಟ್ವಾಳ ವಲಯ ಇದರ ಅಧ್ಯಕ್ಷರಾದ ಇರ್ಷಾದ್ ದಾರಿಮಿ ಅಲ್ ಜಝರಿ ಅವರು ಶಿಬಿರವನ್ನು ಉದ್ಘಾಟಿಸಿದರು.
ಜ.ಕಲಂದರ್ ತುಂಬೆಯವರು ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ SKSSF ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಇಸಾಕ್ ತುಂಬೆ ಅವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜ.ಅಬ್ದುಲ್ ಸಲಾಮ್ (ವ್ಯವಸ್ಥಾಪಕರು, ಬಿ ಎ ಸಮೂಹ ಸಂಸ್ಥೆ ತುಂಬೆ), ಜ.ಮುನೀರ್ (ಗೌರವಾಧ್ಯಕ್ಷ, MNG ಫೌಂಡೇಶನ್), ಇಲ್ಯಾಸ್ ಮಂಗಳೂರು (ಸ್ಥಾಪಕರು, MNG ಫೌಂಡೇಶನ್), ಸಿದ್ದೀಕ್ ಮಂಜೇಶ್ವರ (ಮುಖ್ಯಸ್ಥರು ಬ್ಲಡ್ ಡೋನರ್ಸ್ ಮಂಗಳೂರು), ಜ.ಮುಹಮ್ಮದ್ ಇಮ್ತಿಯಾಝ್ (ಅಧ್ಯಕ್ಷರು, MJM ತುಂಬೆ), ಜ.ಬಶೀರ್ ಮಜಲ್ (ವೈಸ್ ಚೇರ್ಮನ್, SKSSF ವಿಖಾಯ ಕೇಂದ್ರ ಸಮಿತಿ), ಜ.ಹಬೀಬ್ ಅಬ್ದುಲ್ ರಹಮಾನ್ (ಗೌರವಾಧ್ಯಕ್ಷರು, SKSSF ತುಂಬೆ ಶಾಖೆ), ಜ.ಹಾಜಿ ಅಬ್ದುಲ್ ರಹಮಾನ್ ಹದ್ದಾದಿ (ಅಧ್ಯಕ್ಷರು, SYS ತುಂಬೆ ಶಾಖೆ), ಜ.ಕೆ.ಎಮ್.ನಾಸೀರ್ (ಕಟ್ಟಡ ಮಾಲಕರು, ಖುಲ್ಸು ಸೆಂಟರ್ ತುಂಬೆ) ಹಾಗೂ ಜ.ಮುಹಮ್ಮದ್ ಫಯಾಝ್ ತುಂಬೆ (ವೈಸ್ ಚೇರ್ಮನ್, SKSSF ವಿಖಾಯ ಬಂಟ್ವಾಳ ವಲಯ) ಉಪಸ್ಥಿತರಿದ್ದರು.
ಕೊನೆಯಲ್ಲಿ ಜ.ಫಯಾಝ್ ತುಂಬೆ ಅವರು ಧನ್ಯವಾದಗೈದರು ಮತ್ತು ಜ.ಅಬ್ದುಲ್ ರಶೀದ್ ತುಂಬೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಮರ್ಜೆನ್ಸಿ ಹೆಲ್ಪ್ ತಂಡದ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಲಾಕ್ ಡೌನ್ ಸಂಧರ್ಭದಲ್ಲಿ ವಿವಿಧ ಭಾಗದ ಹಲವಾರು ಸಮಾಜ ಸೇವಕರನ್ನು ಒಟ್ಟು ಸೇರಿಸಿ ರಚಿಸಲ್ಪಟ್ಟಂತಹ ಎಮರ್ಜೆನ್ಸಿ ಹೆಲ್ಪ್ ಲೈನ್ ವಾಟ್ಸಾಪ್ ಬಳಗವು ಅದರ ಮೂಲಕ ಕೊರೋನ ಸಂಕಷ್ಟ ಕಾಲದಲ್ಲಿ ಅದರಲ್ಲೂ ಲಾಕ್ ಡೌನ್ ಸಂಧರ್ಭದಲ್ಲಿ ಜಿಲ್ಲೆಯಾದ್ಯಂತ ಜಾತಿ ಮತ ಭೇದವಿಲ್ಲದೆ ಸಾವಿರಕ್ಕೂ ಮಿಕ್ಕಿದ ದಾಖಲೆ ಪ್ರಮಾಣದಲ್ಲಿ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗಿತ್ತು.

ತಂಡದ ಸದಸ್ಯರನ್ನು ಒಟ್ಟುಗೂಡಿಸುವ ಸಲುವಾಗಿ ರಕ್ತದಾನ ಶಿಬಿರದ ಬಳಿಕ ಮಧ್ಯಾಹ್ನ ಖುಲ್ಸು ಸೆಂಟರ್ ಸಭಾಂಗಣದಲ್ಲಿ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಲ್ಲಿ ವಿವಿಧ ಭಾಗದಿಂದ ಒಟ್ಟು ಸೇರಿದ ಸಮಾಜಸೇವಕರುಗಳ ಪರಸ್ಪರ ಮುಖ ಪರಿಚಯ ಮಾಡುವಿಕೆ ಮತ್ತು ಎಲ್ಲಾ ಸದಸ್ಯರುಗಳ ಅಭಿಪ್ರಾಯಗಳನ್ನು ಕ್ರೋಡಿಕರಿಸಲಾಯಿತು.
ಹಾಗೂ ಮುಂದೆ ತಂಡದ ಮುಂದಿರುವ ಜವಾಬ್ದಾರಿಗಳು ಮತ್ತು ಕಾರ್ಯ ಯೋಜನೆಗಳ ಬಗ್ಗೆ MNG ಫೌಂಡೇಶನ್ ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು ಅವರು ಬಹಳ ಸವಿಸ್ತಾರವಾಗಿ ವಿವರಿಸಿಕೊಟ್ಟರು._
ಕೊನೆಯಲ್ಲಿ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದಲ್ಲಿ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮಂಚೂಣಿಯಲ್ಲಿದ್ದ ನಾಲ್ಕು ಸಮಾಜಸೇವಕರುಗಳಾದ ಪಿ.ಬಿ.ಕೆ ಮೊಹಮ್ಮದ್ ಪುತ್ತೂರು, ಅಬ್ಬೋನು ಮದ್ದಡ್ಕ, ಬದ್ರುದ್ದೀನ್ ಉಳ್ಳಾಲ, ಫಾರೂಖ್ ರೊಮಾಂಟಿಕ್ ಆತೂರು ಅವರ ಸೇವೆಯನ್ನು ಗುರುತಿಸಿ MNG ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Share this on:
error: Content is protected !!