Latest Posts

ತ್ರಿವಳಿ ಜಿಲ್ಲೆಗಳ ಸಂಯುಕ್ತ ಖಾಝಿ, ಹಿರಿಯ ವಿದ್ವಾಂಸ, ತಾಜುಲ್ ಫುಕಹಾಅ್ ಬೇಕಲ ಇಬ್ರಾಹಿಂ ಮುಸ್ಲಿಯಾರ್ ನಿಧನ:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಸಂತಾಪ ಸೂಚನೆ

ಹಿರಿಯ ವಿದ್ವಾಂಸ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯ ಸಂಯುಕ್ತ ಖಾಝಿ, ಸುನ್ನಿ ಜಂಇಯ್ಯತುಲ್ ಉಲಮಾ ಇದರ ರಾಜ್ಯಾಧ್ಯಕ್ಷರಾಗಿದ್ದ ಅಲ್ಹಾಜಿ ಬೇಕಲ ಪಿಎಂ ಇಬ್ರಾಹಿಂ ಮುಸ್ಲಿಯಾರ್ ಇಂದು ಬೆಳಿಗ್ಗೆ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಪಾತ್ರರಾಗಿದ್ದಾರೆ ಎನ್ನುವ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು, ಇಂದು ಸಮುದಾಯದ ಪರಿಪೂರ್ಣ ನಾಯಕತ್ವರೊಬ್ಬರನ್ನು ಕಳಕೊಂಡ ಅತೀವ ದುಃಖದಲ್ಲಿದೆ, ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸುತ್ತಿದೆ.


ದೇವ್‌ಬಂದ್ ಅರಬಿಕ್ ಕಾಲೇಜಿನಲ್ಲಿ ಪದವಿ ಪಡೆದು, ಬಂಟ್ವಾಳ ಮತ್ತು ಸೂರಿಂಜೆ ಮಸೀದಿಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ತದನಂತರ ಬೇಕಲದಲ್ಲಿ ಸುದೀರ್ಘ 43 ವರ್ಷಗಳ ಕಾಲ ಸೇವೆ ಸಲ್ಲಿಸಿ ಬೇಕಲ ಉಸ್ತಾದರೆಂದೇ ನಾಮಾಂಕಿತಗೊಂಡಿದ್ದರು.
ಕರ್ಮಶಾಸ್ತ್ರ ಮತ್ತು ಖಗೋಳ ಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿರುವ ಬೇಕಲ ಉಸ್ತಾದರು ತಾಜುಲ್ ಫುಖಹಾಅ್ ಎಂಬ ಬಿರುದನ್ನು ಕೂಡಾ ಪಡೆದಿದ್ದಾರೆ.ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ

Share this on:
error: Content is protected !!