ಪುತ್ತೂರು:ಸ್ವಾತಂತ್ರ್ಯ ಹೋರಾಟಗಾರ,ಹಿರಿಯ ಮೇಧಾವಿ,ಪುತ್ತೂರಿನ ಗಾಂಧಿ ಎಂದೇ ಚಿರಪರಿಚಿತರಾಗಿದ್ದ ಇಬ್ರಾಹಿಂ ಹಾಜಿ ಬೊಳ್ಳಾಡಿ ಇಂದು ಸ್ವ ಗೃಹದಲ್ಲಿ ನಿಧನರಾದರು.96 ವಯಸ್ಸಾಗಿತ್ತು.
‘1934 ರಲ್ಲಿ ಗಾಂಧಿಜಿಯವರು ದೇಶದ ಸ್ವಾತಂತ್ರ್ಯ ಹೋರಾಟ ಪರ್ಯಟನೆಯ ಭಾಗವಾಗಿ ಪುತ್ತೂರಿನಿಂದ ಸುಳ್ಯದ ವರೆಗೆ ಕಾಲ್ನಡಿಗೆ ಜಾಥ ನಡೆದಿತ್ತು. ಅಂದು ಗಾಂಧಿಜಿಯೊಂದಿಗೆ ಯಾತ್ರೆ ನಡೆಸಿದವರಲ್ಲಿ ಬೊಳ್ಳಾಡಿ ಇಬ್ರಾಹಿಂ ಹಾಜಿ ಒಬ್ಬರು. ಅಲ್ಲಿಂದ ಮುಂದೆ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಚಾಟಿ ಏಟು, ಪ್ರತಿಭಟನೆ ಹೊರಾಟ ಮುಂತಾದವುಗಳಲ್ಲಿ ಭಾಗಿಯಾಗಿದ್ದರು.
ಕುಂಬ್ರದ ಶಾಲಾ ಕಾಲೇಜು ಕಟ್ಟಡ ನಿರ್ಮಾಣ ಸಂಬಂಧಿಸಿ ಜಾಗದ ತಕರಾರು ಬಂದಾಗ ಮುಂದೆ ನಿಂತು ಹೋರಾಡಿ ಕಾಲೇಜು ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾದ ಪುತ್ತೂರಿನ ಗಾಂಧಿ.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಬೊಳ್ಳಾಡಿಯ ಅಬ್ಬಕುಂಞಿ ಹಾಗೂ ಆಸ್ಯಮ್ಮ ದಂಪತಿ ಪುತ್ರರಾಗಿದ್ದಾರೆ. 4 ಪುತ್ರ ಹಾಗೂ 2 ಪುತ್ರಿಯರು ಸೇರಿ ಆರು ಮಕ್ಕಳನ್ನು ಅಗಲಿದ್ದಾರೆ.