Latest Posts

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ನ್ಯೂ ಫ್ರೆಂಡ್ಸ್ ಕ್ಲಬ್(ರಿ ಕುಪ್ಪೆಪದವು ಮತ್ತು ಅಲ್-ಫತಹ್ ಕುಪ್ಪೆಪದವು ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ.

ಕುಪ್ಪೆಪದವು:ಮಂಗಳೂರು ಅಕ್ಟೋಬರ್ 04. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆ ಹಾಗೂ ನ್ಯೂ ಫ್ರೆಂಡ್ಸ್ ಕುಪ್ಪೆಪದವು ಮತ್ತು ಅಲ್-ಫತಹ್ ಕುಪ್ಪೆಪದವು ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಕೊರೋನ ಯೋಧರಿಗೆ ಸನ್ಮಾನ ಕಾರ್ಯಕ್ರಮ ಕಾವೇರಿ ವಿದ್ಯಾಲಯ ಕುಪ್ಪೆಪದವಿನಲ್ಲಿ ರವಿವಾರ ಯಶಸ್ವಿಯಾಗಿ ನಡೆಯಿತು.

ಬಹು: ಅಬೂ ಝೈದ್ ಶಾಫಿ ಮದನಿ ಕರಾಯ(ಖತೀಬರು ಬದ್ರಿಯಾ ಜುಮಾ ಮಸೀದಿ ಕುಪ್ಪೆಪದವು )ದುವಾ ಆಶಿರ್ವಚನ ದೊಂದಿಗೆ ನಡೆದ
ಕಾರ್ಯಕ್ರಮದಲ್ಲಿ ಮುಸ್ತಫಾ ಕಾಡಕ್ಕೇರಿ,ಬಶೀರ್ ವಹಬಿ, ಶ್ರೀ ಕೆ ಪುರುಷೋತ್ತಮ,ಫಾ! ಗ್ರೇಶನ್ ಅಲ್ಫಾರಿಸ್,ಸರ್ಫ್ರಾಝ್ ಅಹ್ಮದ್,ಮುಸ್ತಫಾ ಅಡ್ಡೂರು ದೆಮ್ಮಲೆ,ಹಂಝ ಗುತ್ತು,ಮುನೀರ್ ನಡುಪಲ್ಲ,ನೌಶಾದ್ ಹಾಜಿ,ಕೆ ಉಮರಬ್ಬ ನಿತಿನ್ ಮುತ್ತೂರು,ಸಿಸ್ಟರ್ ಜಾನಿಸ್, ಝಕರಿಯಾ ಆಚಾರಿಜೋರ,ಡಿ.ಪಿ ಹಮ್ಮಬ್ಬ,ಪ್ರವೀಣ್ ಆಳ್ವ ಕಡೆಗುಂಡ್ಯ,ಗಿರೀಸ್ ಆಳ್ವ,ಶರೀಫ್ ಕ ಜೆ,ಬಶೀರ್ ಕರಾಯ,ಹರಿಯಪ್ಪ ಮುತ್ತೂರು,ರಫೀಕ್ ಆಚಾರಿಜೋರ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೋರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 59 ಯುನಿಟ್ ರಕ್ತ ಸಂಗ್ರಹಿಸಲಾಯಿತು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಕುಪ್ಪೆಪದವಿನ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಅಲ್-ಫತಹ್ ಕುಪ್ಪೆಪದವು ಹಾಗೂ ನ್ಯೂ ಫ್ರೆಂಡ್ಸ್ ಕ್ಲಬ್(ರಿ)ಕುಪ್ಪೆಪದವು ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ ಎಂದು ಮಾಧ್ಯಮ ವಿಭಾಗವಾದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!