Latest Posts

ಕ್ಯಾಂಪಸ್ ವಿಂಗ್ ಕಟ್ಟತ್ತಾರು ನೂತನ ಸಮಿತಿ ಅಸ್ತಿತ್ವಕ್ಕೆ; ಯಶಸ್ವಿಯಾಗಿ ನಡೆದ ಕ್ಯಾಂಪಸ್ ಮೀಟ್ 2020

ಪುತ್ತೂರು: SKSSF ಕಟ್ಟತ್ತಾರು ಕ್ಯಾಂಪಸ್ ವಿಂಗ್ ನೂತನ ಸಮಿತಿ ರೂಪೀಕರಣ ಹಾಗೂ ಕ್ಯಾಂಪಸ್ ಮೀಟ್ ಸಂಗಮವು ಅಕ್ಟೋಬರ್ 10 ರಂದು SKSSF ಕಟ್ಟತ್ತಾರು ಶಾಖಾ ಕಚೇರಿ ಯಲ್ಲಿ ರಶೀದ್ ಯಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದ ದುಆ: ಮತ್ತು ಉದ್ಘಾಟನೆಯನ್ನು ರಶೀದ್ ಯಮಾನಿ ಉಸ್ತಾದರು ನೆರವೇರಿಸಿದರು. ತಿಂಗಳಾಡಿ ಕ್ಲಸ್ಟರ್ ಕ್ಯಾಂಪಸ್ ವಿಂಗ್ ಜನರಲ್ ಕನ್ವೀನರ್ ಮುಸ್ತಫಾ ಕಟ್ಟತ್ತಾರು ಸ್ವಾಗತಿಸಿದರು. ಕ್ಯಾಂಪಸ್ ವಿಂಗ್ ಬಗ್ಗೆ ಝಿಯಾದ್ ನಂಜೆ ಪ್ರಾಸ್ತಾವಿಕವಾಗಿ ಮಾತಾನಾಡಿದರು.ತ್ವಲಬಾ ವಿಂಗ್ ಪುತ್ತೂರು ವಲಯ ಚೇರ್ಮನ್ ರಹ್ಮಾನಿಯಾ ಕಡಮೇರಿ ವಿದ್ಯಾರ್ಥಿ ಶಫೀಕ್ ರವರು ಕ್ಯಾಂಪಸ್ ಬಗ್ಗೆ ತರಬೇತಿ ನೀಡಿದರು.

SKSSF ಕ್ಯಾಂಪಸ್ ವಿಂಗ್ ಕಟ್ಟತ್ತಾರು ಯೂನಿಟ್ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಚೇರ್ಮನ್ ಆಗಿ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿ ಹಫೀಝ್ ಮುರುಳ್ಯ,ಜನರಲ್ ಕನ್ವಿನರ್ ಝಿಯಾದ್ ನಂಜೆ,ಕೋಶಾಧಿಕಾರಿಯಾಗಿ ನಾಸಿರ್ ಕಟ್ಟತ್ತಾರು,ವರ್ಕಿಂಗ್ ಕನ್ವೀನರ್ ಫಕ್ರುದ್ದೀನ್ ಕಟ್ಟತ್ತಾರು,ವೈಸ್ ಚೇರ್ಮನ್ ಹಾಶಿಮ್ ನಿಡ್ಯಾನ,ವೈಸ್ ಕನ್ವಿನರ್ ಫಾರೂಕ್ ಕಟ್ಟತ್ತಾರು,ಕ್ಲಸ್ಟರ್ ಕೌನ್ಸಿಲರ್ ಗಳಾಗಿ ನಾಸಿರ್ ಕಟ್ಟತ್ತಾರು,ಮಿದ್‌ಲಾಜ್ ನಿಡ್ಯಾನ ಹಾಗೂ ಸದಸ್ಯರುಗಳಾಗಿ ಮುಸ್ತಫಾ, ನಿಝಾರ್, ಸಿರಾಜ್,ಶರೀಫ್,ಮುಝಮ್ಮಿಲ್,ಮುಝಮ್ಮಿಲ್ ಎಚ್. ಕೆ, ಬಾಸಿತ್,ತಂಶೀರ್,ರಿಶಾನ್,ಸೆಬೀಲ್, ಸಿನಾನ್,ಮಿಕ್ದಾದ್ ಮೊದಲಾದವರನ್ನು ಆಯ್ಕೆಮಾಡಲಾಯಿತು.ಶಾಖಾ ಸದಸ್ಯರಾದ ಮುಸ್ತಾಕ್ ಹಾಗೂ ಹೈದರ್ ಅಲಿ ಅಥಿತಿಗಳಾಗಿ ಪಾಲ್ಗೊಂಡಿದ್ದರು.ಯೂನಿಟ್ ಕ್ಯಾಂಪಸ್ ವಿಂಗ್ ನೂತನ ಚೇರ್ಮನ್ ಹಫೀಝ್ ಮುರುಳ್ಯ ವಂದಿಸಿದರು.

Share this on:
error: Content is protected !!