ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಸುರತ್ಕಲ್ ನಲ್ಲಿ ನಡೆದು ಬರುವ ಭಾನುವಾರ ದಿನದ ಸಂತೆ ವ್ಯಾಪಾರ ನಡೆಸಲು ತಕ್ಷಣವೇ ಅನುಮತಿ ನೀಡಬೇಕೆಂದು ಆಗ್ರಹಿಸಿ ಶನಿವಾರ ಬೆಳಗ್ಗೆ ಲಾಲ್ ಬಾಗ್ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸಂತೆ ವ್ಯಾಪಾರಸ್ಥರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ದಿನ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು , ಭಾನುವಾರ ದಿನದ ಸಂತೆ ವ್ಯಾಪಾರ ಸ್ಥಗಿತ ವಾಗಿರುವುದರಿಂದ , ಕೇವಲ ಸಂತೆ ವ್ಯಾಪಾರದಿಂದಲೇ ಜೀವನ ನಡೆಸುವ ಸಂತೆ ವ್ಯಾಪಾರಸ್ಥರ ದೈನಂದಿನ ಜೀವನಕ್ಕೆ ಅಡಚಣೆಯಲ್ಲಿ ಸಿಲುಕಿದಂತಾಗಿದೆ.
1990 ರಿಂದ ಎಂ.ಆರ್.ಪಿ.ಎಲ್ . ಸಂಸ್ಥೆಯು ಇಲ್ಲಿ ಕಾರ್ಯಾಚರಣೆ ಗೊಂಡ ಸಂದರ್ಭ ಬುಧವಾರ ಸಂತೆ ಯೊಂದಿಗೆ ಭಾನುವಾರ ಸಂತೆಯ ಸುಮಾರು 30 ವರ್ಷಗಳಿಂದ ನಡೆಯುತ್ತ ಬರುವುದು ತಮಗೆ ತಿಳಿದ ವಿಚಾರವಾಗಿದೆ. ಕೋವಿಡ್ 19 ರ ಕಾರಣದಿಂದ ನಿಲ್ಲಿಸಲಾಗಿದ್ದ ಭಾನುವಾರದ ಸಂತೆಯನ್ನು ಪುನರಾರಂಭಿಸಬೇಕು . ಹಾಗೆಯೇ ಸಂತೆ ವ್ಯಾಪಾರ ಮಾಡುವ ಚಿಕ್ಕಪುಟ್ಟ ವ್ಯಾಪಾರಿಗಳು ಅದರ ಆದಾಯವನ್ನು ಅವಲಂಬಿಸಿರುವ ಕಾರಣ ಇತ್ತೀಚೆಗೆ ಆದಿತ್ಯವಾರದ ಸಂತೆಯನ್ನು ನಿಲ್ಲಿಸಿರುವುದು ಸಾರ್ವಜನಿಕ ಬಡವರ ಹೊಟ್ಟೆಗೆ ಮಾರಕವಾಗಿದೆ .ಅಲ್ಲದೆ ರವಿವಾರ ಕಾರ್ಮಿಕರಿಗೆ ರಜಾದಿನವಾಗಿ ಅನುಕೂಲವಾಗುವ ಕಾರಣ ಆ ದಿನದ ಸಂತೆ ಬಹಳಷ್ಟು ಸೂಕ್ತವಾಗಿದೆ. ಹಾಗೆಯೇ ಶುಚಿತ್ವ ಕಾಪಾಡುವ ಡಸ್ಟ್ ಬಿನ್ ವ್ಯವಸ್ಥೆಯು ಕೂಡ ಮಾಡಲಾಗಿದೆ ಹಾಗೂ ಇಂಟೆಕ್ ಸಂಘಟನೆಯ ಕಾರ್ಯಕರ್ತರು ಶಿಸ್ತು ಪಾಲಿಸುದರಲ್ಲಿ ಬದ್ಧರಾಗಿದ್ದಾರೆ.
ಆದರೆ ನಮ್ಮ ಈ ಹಿಂದೆ ನೀಡಿರುವ ಮನವಿಯನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾವಿಸಿ ಅನುಮತಿಸುವ ವರೆಗೆ ಸಮಯಾವಕಾಶ ಕೋರಿದ್ದಾರೆ ಇದೀಗ ಸುಮಾರು 3 ವಾರಗಳು ಕಳೆದರೂ ಯಾವುದೇ ಅನುಮತಿ ಸೂಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸಂತೆ ವ್ಯಾಪಾರಸ್ಥರು ನಡೆಸಿದರು . ಶಾಸಕ ಯು.ಟಿ ಖಾದರ್ , ಇಂಟಕ್ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ , ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ ಪಾಲಿಕೆ ನಿರ್ಧಾರವನ್ನು ಖಂಡಿಸಿ ಪಾಲಿಕೆ ಕೊರೋನಾ ಬಳಿಕ ಬಡವರ ಬದುಕಿನ ಹಾದಿಯನ್ನು ಬಂದ್ ಮಾಡುತ್ತಿದೆ.ಕೊರೊನಾ ನಿಯಮಾವಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು . ಪುನೀತ್ , ವಿನೋದ್ ರಾಜ್ ಪಣಂಬೂರು , ವ್ಯಾಪರಸ್ತರ ಒಕ್ಕೂಟದ ಮಹಮ್ಮದ್ , ಅಸ್ಕರ್ , ಬದ್ರುದ್ದಿನ್ ಮತ್ತಿತರರು ಉಪಸ್ಥಿತರಿದ್ದರು . ಈ ಸಂದರ್ಭ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಎಂದು ಅಬ್ದುಲ್ ಲತೀಫ್ ಕಂಚಿನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.