Latest Posts

SYS ಉಪ್ಪಿನಂಗಡಿ ವಲಯ ಸಮಿತಿ ಹಾಗು ಫೈಝಿಸ್  ವತಿಯಿಂದ ಕಿಟ್ ವಿತರಣೆ

ಉಪ್ಪಿನಂಗಡಿ: ಉಪ್ಪಿನಂಗಡಿ SYS ವಲಯ ಸಮಿತಿ ವತಿಯಿಂದ SYS  ದ.ಕ ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಹಾಗು ಫೈಝಿಸ್ ಇದರ ವತಿಯಿಂದ  ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಮದರಸ ಅಧ್ಯಾಪಕರಿಗೆ ಕಿಟ್ ವಿತರಣಾ ಸಮಾರಂಭ ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಜುಮಾ ಮಸೀದಿ ವಠಾರದಲ್ಲಿ ಸಮಿತಿ ಅಧ್ಯಕ್ಷರಾದ ಯುನಿಕ್ ಅಬ್ದುಲ್ ರಹ್ಮಾನ್ ರವರ ಘನ ಅಧ್ಯಕ್ಷತೆಯಲ್ಲಿ ದಿನಾಂಕ ಅಕ್ಟೋಬರ್ 18 ರಂದು  ನಡೆಯಿತು.
ಕರ್ನಾಟಕ ರಾಜ್ಯ ಕೌನ್ಸಿಲರೂ, ಉಪ್ಪಿನಂಗಡಿ ವಲಯ ಕೋಶಾಧಿಕಾರಿ ಬಹು S.B ಮುಹಮ್ಮದ್ ದಾರಿಮಿ ಸಮಾರಂಭ ವನ್ನು ಉದ್ಘಾಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ  K.L .ಉಮರ್ ದಾರಿಮಿ ಪಟ್ಟೋರಿ ವಿಷಯ ಮಂಡಿಸಿ ಮಾತನಾಡಿದರು.
SYS ಉಪ್ಪಿನಂಗಡಿ ವಲಯ ಸಮಿತಿ ಮಜ್ಲಿಸುನ್ನೂರ್ ಚೀಫ್ ಅಮೀರ್ ಕೆ.ಯಂ.ಎಸ್ ಫೈಝಿ ಕರಾಯ   ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭ ದಲ್ಲಿ ಮಾಲಿಕ್ಕುದ್ದೀನಾರ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜನಾಬ್ ಶುಕೂರು ಹಾಜಿ ಹಾಗೂ ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು. ಉಪ್ಪಿನಂಗಡಿ SYS ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಇ.ಕೆ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕರಾಯ ಸ್ವಾಗತಿಸಿ ವಂದಿಸಿದರು.

Share this on:
error: Content is protected !!