
ಹಳೆಯಂಗಡಿ: ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ ಶಂಸುಲ್ ಉಲಮಾ ಮೌಲಿದ್ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರ ರಾತ್ರಿ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ನಲ್ಲಿ ನಡೆಯಿತು. ಶೈಖುನ ಬೊಳ್ಳೂರು ಉಸ್ತಾದರ ದುಃಅ ಹಾಗೂ ಉದ್ಘಾಟನೆ ಕಾರ್ಯಕ್ರಮ ನೆರೆವೇರಿಸಿದರು. ತ್ವಯ್ಯಿಬ್ ಫೈಝಿ ಯವರ ನೇತೃತ್ವ ದಲ್ಲಿ ಶಂಸುಲ್ ಉಲಮಾ ಮೌಲಿದ್ ಜರಗಿತು.ಕಾರ್ಯಕ್ರಮ ದಲ್ಲಿ ಅಬೂಬಕ್ಕರ್ ಮದನಿ, ನಾಸಿರ್ ಮುಸ್ಲಿಯಾರ್, ರಶೀದ್ ಮುಸ್ಲಿಯಾರ್,ಯಾಹ್ಯಾ ಪರಂಗಿಬೊಟ್ಟು, ಬಿ.ಇ.ಮುಹಮ್ಮದ್,ಅಲ್ಫಾಜ್ ಬೊಳ್ಳೂರು,ಝೈನುದ್ದಿನ್ ಇಂದಿರಾನಗರ,ಅಲ್ಫಝ್ ಇಂದಿರಾನಗರ ಉಪಸ್ಥಿತರಿದ್ದರು ಎಂದು ತಮೀಮ್ ಬೊಳ್ಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
