ಬಂಟ್ವಾಳ : ಬಂಟ್ವಾಳಪುರಸಭಾದ ನೂತನ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಶಾಂತಿಅಂಗಡಿ ಮತ್ತು ನೂತನ ಉಪಾಧ್ಯಕ್ಷರಾದ ಶ್ರೀಮತಿ ಜೇಸಿಂತಾ ಡಿಸೋಜ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್ ಎಸ್ ಮೊಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಹಾಗೂ ಬೇಬಿ ಕುಂದರ್,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರದಾನಕಾರ್ಯದರ್ಶಿಯಾದ ಮೊಹಮ್ಮದ್ ನಂದಾವರ,ಪುರಸಭಾ ಸದಸ್ಯರಾದ ಲೋಲಾಕ್ಷ,ಮಸ್ಜಿದ್-ಎ- ಮಸೀದಿಯ ಮುತ್ತಲಿಬ್ ಗೂಡಿನಬಳಿ ಅಧ್ಯಕ್ಷರಾದ ಮಜೀದ್, ಮಸೀದಿಯ ಪ್ರಧಾನಕಾರ್ಯದರ್ಶಿಯಾದ ಅಸ್ಲಂ,ಗೂಡಿನಬಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೆರೀಂ, ಹಿರಿಯ ಕಾಂಗ್ರೆಸ್ ಮುಖಂಡರಾದಅಬ್ದುಲ್ ಖಾಧರ್, ಸಾಲಿಹ್,ಫೇಲಿಸ, ಪರ್ವೇಜ್ ಜಿ ಕೆ , ಕಾಸಿಮ್,ಇಸ್ಮಾಯಿಲ್ ,ರಝಾಕ್ ಹಾಗೂ ಯುವ ಮುಖಂಡರಾದ ರಿಜ್ವಾನ್,ಅಮೀನ್,ಸಂಶೀರ್,ಮುನ್ನ,ತೌಸೀಫ್,ಮುಸ್ತ,ಇಸ್ರಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಬಿ ರಾಮಚಂದ್ರ ರಾವ್ ನಡೆಸಿಕೊಟ್ಟರು.