Latest Posts

ಕೇಂದ್ರ ಸರಕಾರದ ತೀರ್ಮಾನದ ಬಳಿಕ ಕಂಬಳವನ್ನು ಆಯೋಜಿಸಲಾಗುವುದ : ಪಿ.ಆರ್‌. ಶೆಟ್ಟಿ

ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸುವುದು ನಮ್ಮೆಲ್ಲರ ಇಂಗಿತ. ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿಯನ್ನು ಆಧರಿಸಿ ಕಂಬಳ ಆಯೋಜಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಮಂಗಳೂರು: ಕೇಂದ್ರ ಸರಕಾರದ ಮಾರ್ಗಸೂಚಿ ಆಧರಿಸಿ ಮುಂದಿನ  ಕಂಬಳ ಬಗ್ಗೆ  ಆಯೋಜಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ ಹೇಳಿದರು.

ನಗರದ ಓಷಿಯನ್‌ ಪರ್ಲ್ ಹೋಟೆಲ್‌ನಲ್ಲಿ ಆದಿತ್ಯವಾರ ನಡೆದ ಕಂಬಳ ಸಮಿತಿ ಮತ್ತು ಕಂಬಳ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದರು.

ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆಯಾಗಿರುವ ಕಂಬಳ ನಡೆಸುವುದು ನಮ್ಮೆಲ್ಲರ ಇಂಗಿತ. ಈ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಅವರು ಪೂರಕವಾಗಿ ಸ್ಪಂದಿಸಿ ಮುಂದಿನ ಗೈಡ್‌ಲೈನ್‌ ಬಳಿಕ ಕಂಬಳದ ಬಗ್ಗೆ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. L

ಕಂಬಳಕ್ಕೆ ಅನುಮತಿ ನೀಡುವ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೊಸ ಮಾರ್ಗಸೂಚಿ ಬಂದ ಕೂಡಲೇ ಸಮಿತಿ ಕಂಬಳ ಆಯೋಜನೆ ಬಗ್ಗೆ ನಿರ್ಧರಿಸಲಿದೆ. ಕಂಬಳದ ಪೂರ್ವ ತಯಾರಿ ಸೇರಿದಂತೆ ಇತರ ವಿಷಯ ಚರ್ಚಿಸಲು ಡಿಸೆಂಬರ್‌ನಲ್ಲಿ ಕಂಬಳ ಸಮಿತಿ ಮತ್ತೊಂದು ಸುತ್ತಿನ ಸಭೆ ಸೇರಲಿದೆ. ಜನವರಿ ತಿಂಗಳಿನಿಂದ ಕಂಬಳ ಆಯೋಜಿಸುವುದಾದರೆ ಎಲ್ಲರ ಸಹಕಾರ ಅಗತ್ಯ ಎಂದರು.

ಕೇಂದ್ರದ ಮುಂದಿನ ತೀರ್ಮಾನದ ಬಳಿಕ ಕಂಬಳ ಬಗ್ಗೆ ಆಯೋಜನೆ: ಕೋಟ ಶ್ರೀನಿವಾಸ ಪೂಜಾರಿ

ಕಂಬಳ ಸಮಿತಿ ಉಪಾಧ್ಯಕ್ಷ ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಪ್ರಧಾನ ಕಾರ್ಯದರ್ಶಿ ರಾಜೀವ್‌ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಸುರೇಶ್‌ ಪೂಜಾರಿ, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್‌ ಕಂಗಿನಮನೆ, ಕಂಬಳ ಕೋಣಗಳ ಯಜಮಾನರು, ವ್ಯವಸ್ಥಾಪಕರಾದ ಎರ್ಮಾಳ್‌ ರೋಹಿತ್‌ ಹೆಗ್ಡೆ, ಬ್ರಿಜೇಶ್‌ ಚೌಟ, ವಿಶಾಲ್‌ ಕೆ. ಪೂಜಾರಿ ಬೋಳೂರು, ಚಂದ್ರಹಾಸ ಶೆಟ್ಟಿ, ಹೊಕ್ಕಾಡಿಗೋಳಿ ರಶ್ಮಿತ್‌ ಶೆಟ್ಟಿ, ರಾಮಚಂದ್ರ ನಾಯಕ್‌ ಮೂಲ್ಕಿ, ಕಂಬಳ ಕೋಣಗಳ ಯಜಮಾನ ಮುಚ್ಚೂರು ಕಲ್ಕುಡ ಲೋಕೇಶ್‌ ಶೆಟ್ಟಿ, ಮಾಂಕಾಳಿಪಡ್ಪು ಸೀತಾರಾಮ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Share this on:
error: Content is protected !!