Latest Posts

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಸಭೆ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರ್ಮಿಕ ಪುರುಷರಾದ ಕೋಟಿ ಚೆನ್ನಯ ನವರ ಹೆಸರು ಇಡಬೇಕೆಂದು ಒತ್ತಾಯಿಸಿ ದಿನಾಂಕ 18 ರಂದು ತಾರೀಖಿನಂದು ಮಂಗಳೂರಿನ ಕದ್ರಿ ಪಾರ್ಕಿನಿಂದ ಬಜ್ಪೆ ಕೆಂಜಾರು ತನಕ ನಡೆಯುವ ಪಂಜಿನ ಮೆರವಣಿಗೆಯ ಪೂರ್ವಬಾವಿ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಿಥುನ್ ರೈಯವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.

ಬಳಿಕ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಕರ್ತ ಮುದ್ದಸ್ಸಿರ್ ಕುದ್ರೋಳಿ ಅವರ ಹೆಸರಿನಲ್ಲಿ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಂತಾಪ ಸೂಚನೆ ಮಾಡಿ ಮಾತನಾಡಿದ ಶ್ರೀ ಮಿಥುನ್ ರೈಯವರು ಮುದಸ್ಸಿರ್ ಒಬ್ಬರು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿದ್ದು Covid19 ಸಂದರ್ಭದಲ್ಲಿ ಕೋರೊಣ ವಾರಿಯರ್ಸಾಗಿ ಕೆಲಸ ಮಾಡಿ ಗಮನ ಸೆಳೆದಿದ್ದರು ಅದಕ್ಕೆ ಮರಣ ಸಮಯದಲ್ಲಿ ಸೇರಿದ ಜನಸಾಗರವೆ ಸಾಕ್ಷಿ ಎಂದ ಅವರು ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕಕ್ಕೆ ಭಗವಂತ ನೀಡಲಿ ಎಂದು ಸಂತಾಪ‌ ಸೂಚಿಸಿದರು ಈ ವೇಳೆ ಎಲ್ಲರೂ ಎದ್ದು ನಿಂತು ಮೌನ ಪ್ರಾರ್ಥನೆ ಮಾಡಿ ಗೌರವ ಸಲ್ಲಿಸಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮನಪಾ ಸದಸ್ಯರಾದ ಅನಿಲ್ ಕುಮಾರ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಲುಕ್ಮಾನ್ ಬಂಟ್ವಾಳ, ಗಿರೀಶ್ ಆಳ್ವ, ಮೆರಿಲ್ ರೆಗೋ ಪ್ರಸಾದ್ ಮಲ್ಲಿ, ನವೀದ್ ಅಕ್ತರ್, ನಾಸಿರ್ ಸಾಮನಿಗೆ, ಲಾರೆನ್ಸ್ ಡಿಸೋಜ, ಶಬೀರ್ ಕೆಂಪಿ, ಚಿತ್ತರಂಜನ್ ಶೆಟ್ಟಿ, ರಮಾನಂದ ಪುಜಾರಿ, ಸೌಹಾನ್, ತೌಫೀಕ್ ವಲಚ್ಚಿಲ್, ಸರ್ಪರಾಝ್, ಅಬೂಸಮೀರ್, ಸಮರ್ಥ್ ಭಟ್, ರಘುರಾಜ್ ಕದ್ರಿ, ಅನ್ಸಾರುದ್ದೀನ್ ಸಾಲ್ಮರ,ಹಿಶಾಂ ಫರಂಗಿಪೇಟೆ, NSUI ಅದ್ಯಕ್ಷ ಸವಾದ್ ಸುಳ್ಯ,ಅತಿಕ್ ಫರಂಗಿಪೇಟೆ,ಸಲ್ಮಾನ್ ಫರಂಗಿಪೇಟೆ,ಯಸೀರ್ ಫರಂಗಿಪೇಟೆ,ಫಶ್ವಾತ್ ಫರಂಗಿಪೇಟೆ,ರಿಲ್ವಾನ್ ಅಮಾಮ್ಮೆರ್,ತಸೀಕ್ ಫರಂಗಿಪೇಟೆ,ನೆಸೀಬ್ ವಲಚ್ಚಲ್,ಫೈಝಲ್ ವಲಚ್ಚಲ್ ಮತ್ತು ಕಾರ್ಯಕರ್ತರು ಉಪಸ್ಥಿತಿಯಿದ್ದರು.

Share this on:
error: Content is protected !!