Latest Posts

ದ.ಕ: ಕೊರೋನಕ್ಕೆ ಬಲಿಯಾದವರ ಸಂಖ್ಯೆ 700 ಕ್ಕೆ ಏರಿಕೆ

ಮಂಗಳೂರು: ಕೋವಿಡ್ -19 ಗೆ ದ.ಕ. ಜಿಲ್ಲೆಯಲ್ಲಿ ಗುರುವಾರ ಮತ್ತಿಬ್ಬರು ಬಲಿ ಯಾಗುವುದರೊಂದಿಗೆ ಈವರೆಗೆ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 700 ಕ್ಕೇರಿದೆ . ಜಿಲ್ಲೆಯಲ್ಲಿ ಈವರೆಗೆ 3,18,605 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ . ಈ ಪೈಕಿ 2,87,167 ಮಂದಿಯ ವರದಿ ನೆಗೆಟಿವ್ ಮತ್ತು 31,438 ಮಂದಿಯ ವರದಿ ಪಾಸಿಟಿವ್ ಬಂದಿದೆ . ಗುರುವಾರ 54 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದು , 54 ಮಂದಿ ಗುಣಮುಖರಾಗಿದ್ದಾರೆ . ಒಟ್ಟಾರೆ ಈವರೆಗೆ ಗುಣಮುಖರಾದವರ ಸಂಖ್ಯೆ 30,073 ಕ್ಕೇರಿದೆ.ಅಲ್ಲದೆ ಮೃತಪಟ್ಟವರ ಸಂಖ್ಯೆ 700 ಕ್ಕೇರಿದೆ . ಸದ್ಯ ಜಿಲ್ಲೆಯಲ್ಲಿ 665 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

ಮಾಸ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಈವರೆಗೆ 13,493 ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದ್ದು , 14,59,642 ರೂ . ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ .

Share this on:
error: Content is protected !!