Latest Posts

SKSSF ಟ್ರೆಂಡ್  ಓರಿಯೆಂಟೇಷನ್ ಪ್ರೋಗ್ರಾಮ್

ಮಂಗಳೂರು: ಎಸ್ಕೆಎಸ್ಸೆಸ್ಸೆಫ್  ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ಟ್ರೆಂಡ್   ಸ್ಮೈಲ್ ಪ್ರಾಜೆಕ್ಟ್
ಇದರ ಓರಿಯೆಂಟೇಷನ್ ಕಾರ್ಯಕ್ರಮ  ಜುವೈರಿಯಾ ಆಂಗ್ಲ ಮಾಧ್ಯಮ ಶಾಲೆ, ಕುಂಪನಮಾಜಲು, ಪರಂಗಿಪೇಟೆಯಲ್ಲಿ ನಡೆಯಿತು, ಟ್ರೆಂಡ್  ದ.ಕ. ಜಿಲ್ಲೆ  ಚೈರ್ಮೆನ್ ಅಬ್ದುಲ್ ಸಮದ್ ಸಾಲೆತ್ತೂರು ಸ್ವಾಗತಿಸಿ, ಮಂಗಳೂರು ಕೇಂದ್ರ ಮಸೀದಿ ಖತೀದರಾದ  ಸದಕತುಲ್ಲಾ ಫೈಝಿ ದುಆ ಮೂಲಕ ಉದ್ಘಾಟಿಸಿ, ಜಿಲ್ಲಾ ಉಪಾಧ್ಯಕ್ಷ  ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಸಭಾ ಅಧ್ಯಕ್ಷತೆ ವಹಿಸಿದರು

ಕೇಂದ್ರ ಪ್ರಧಾನ  ಕಾರ್ಯದರ್ಶಿಯಾದ  ಸತ್ತಾರ್ ಸಾಹೇಬ್ ಪಂದಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಖಾಯ ಉಸ್ತುವಾರಿ ಕಾರ್ಯದರ್ಶಿ ಇಸಾಕ್ ಹಾಜಿ ತೋಡಾರ್, ಕನ್ವೀನರ್  ಅಬ್ದುಲ್ ಸಲಾಂ ಅಡ್ಡೂರು,ಇಲಲ್ ರಾಫಿ, ವೈಸ್ ಕನ್ವೀನರ್ ನಬ್ಸೀರ್, ಸಿದ್ದೀಕ್ ನಾವೂರ, ನೌಶಾದ್ ಅನ್ಸಾರಿ, ಸಫ್ವಾನ್  ಬಂಟ್ವಾಳ, ಲಿಯಾವುದ್ದೀನ್, ಯಾಸೀರ್, ಉಪಸ್ಥಿತರಿದ್ದರು,ವೈಸ್ ಚೈರ್ಮೆನ್ ಬದ್ರುದ್ದೀನ್ ಕುಕ್ಕಾಜೆ ಕಾರ್ಯಕ್ರಮವನ್ನು ನಿರೂಪಿಸಿದರು

Share this on:
error: Content is protected !!