Latest Posts

ಕಟ್ಟತ್ತಾರಿನಲ್ಲಿ ಸಮಸ್ತ ಪ್ರಾರ್ಥನಾ ದಿನಾಚರಣೆ

ಪುತ್ತೂರು: ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನ ದಂತೆ ಬದ್ರಿಯಾ ಜುಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಮದ್ರಸ ಕಟ್ಟತ್ತಾರು ಆಶ್ರಯದಲ್ಲಿ ನವೆಂಬರ್ 22 ಆದಿತ್ಯವಾರ ಸಮಸ್ತ ಪ್ರಾರ್ಥನಾ ದಿನ ನಡೆಯಿತು.ಕೋವಿಡ್-19 ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಸಮಸ್ತದ ಹಲವಾರು ಉಲಮಾ ನೇತಾರರು ವಫಾತಾದದ್ದು ರಬೀಉಲ್ ಆಖರ್ ತಿಂಗಳಲ್ಲಾಗಿದೆ. ಆದುದರಿಂದ ಪ್ರತಿ ವರ್ಷ ರಬೀಉಲ್ ಆಖರ್ ತಿಂಗಳ ಪ್ರಥಮ ಆದಿತ್ಯವಾರವನ್ನು ಸಮಸ್ತ ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗುತ್ತದೆ.

ಉಸ್ತಾದ್ ಉಮರ್ ಮುಸ್ಲಿಯಾರ್ ನಂಜೆ ಪ್ರಾರ್ಥನೆಗೆ ನೇತೃತ್ವ ನೀಡಿದರು.ದಾವೂದ್ ಸಅದಿ,ಸಿದ್ದೀಕ್ ಫೈಝಿ,ಅಬ್ದುರ್ರಹ್ಮಾನ್ ಹಾಜಿ ಮೊದಲಾದವರು ಭಾಷಣ ಮಾಡಿದರು.ಊರಿನವರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದರು.

Share this on:
error: Content is protected !!