ಉಳಾಯಿಬೆಟ್ಟು: ವಾರ್ಡ್-3 ಇದರ ಕಾಂಗ್ರೆಸ್ ಪಕ್ಷದ ವಿಜೇತ ಸದಸ್ಯರಾದ ಉಮ್ಮರ್ ಫ಼ಾರೂಕ್ ರವರು ಮಕ್ಕಳ ವಿದ್ಯಾಭ್ಯಾಸದ ಗುರಿಯನ್ನು ಮುಂದಿಟ್ಟುಕೊಂಡು ಮುಂಬರುವ ದಿನಗಳಲ್ಲಿ ತನ್ನ ವಾರ್ಡ್ ನಲ್ಲಿರುವ ಪ್ರತೀ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು ಇದರಿಂದ ಮಾದರಿ ವಿಧ್ಯಾವಂತರ ವಾರ್ಡ್ ಅನ್ನಾಗಿ ಮಾಡಬೇಕು ಮತ್ತು ಮುಂದಿನ ದಿನದಲ್ಲಿ ತನ್ನ ವಾರ್ಡ್ ನಲ್ಲಿ ಕನಿಷ್ಠ ಮಕ್ಕಳನ್ನಾದರು ಸರಕಾರಿ ನೌಕರರನ್ನಾಗಿ ಮಾಡ್ಬೇಕು ಅದಕ್ಕಾಗಿ ಸರಕಾರದಿಂದ ಬೇಕಾದ ಸವಲತ್ತನ್ನು ತನ್ನ ಪಕ್ಷದ ನೇತಾರರ ಮುಖೇನ ತಂದು ಕೊಡಲಾಗುವುದು, ಗ್ರಾಮ ಪಂಚಾಯತ್ ನಿಂದ ಸಿಗುವ ಸವಲತ್ತನ್ನು ತರಿಸಿ ಕೊಡಲಾಗುವುದು ಹಾಗೂ ತನ್ನ ಕೈಯಿಂದ ಬೇಕಾದ ಸಹಾಯ ಮಾಡಲಾಗುವುದು ಎಂದು ಶಿಕ್ಷಣದ ಬಗ್ಗೆ ಮಕ್ಕಳಿಗೆ ಉತ್ತೇಜನ ನೀಡಿದರು
ಅದರಂತೆ ” ನೀ ಓದ್ರೇ ಬಾ ಓದು ” ಅನ್ನುವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂಧರ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾದ ಶರೀಫ಼್ ಕಣಿಬೆಟ್ಟು, ಅಬೂಬಕ್ಕರ್ ಉಳಾಯಿಬೆಟ್ಟು, ಎಂ. ಇಸ್ಮಾಯಿಲ್, ಮಮತಾ ಸನಿಲ್, ನಮಾಝ್ KBR, ಇಸ್ಮಾಯಿಲ್ ತವಕ್ಕಲ್, ರಫ಼ೀಕ್ ತವಕ್ಕಲ್, ಹಸೈನಾ ಬೊರುಗುಡ್ಡೆ, ನೌಫ಼ಲ್ ಮುಂಡಾಡಿ, ರಶೀದ್ , ಮನ್ಸೂರ್ ಮುಂಡಾಡಿ, ಯೂಸುಫ಼್ ಮುಂಡಾಡಿ, ನಜ಼ೀರ್ ಮೆಲ್ಮನೆ, ಸಾಹುಲ್ ಗುತ್ತಿಗೆದಾರರು, ಫ಼ೈಝಲ್ S.F. ಅಬ್ದುಲ್ ಖಾದರ್ (ಮೊನಾಕ),
ಕರೀಂ ಕುಕ್ಕೆ ಪಡ್ಪು, ಜೊತೆ ಸೇರಿದರು.