ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ 72ನೇ ಗಣರಾಜ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು
ಬೆಳಿಗ್ಗೆ 7:00 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಮುಫ್ತಿ ರಫೀಕ್ ಅಹಮದ್ ಹುದವಿ ಕೋಲಾರ ಧ್ವಜಾರೋಹಣಗೈದು ಮುಖ್ಯಪ್ರಭಾಷಣವನ್ನು ನಡೆಸಿದರು. ಸಅದ್ ಮದನಿ ಮತ್ತು ಅಬ್ದುಲ್ ಲತೀಫ್ ಬಾಖವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಪ್ರಾಧ್ಯಾಪಕರು ಕಾಲೇಜು ಆಡಳಿತ ಸಮಿತಿಯ ಸದಸ್ಯರು ಸ್ಥಳೀಯರು ಭಾಗವಹಿಸಿದರು.
ವಿದ್ಯಾರ್ಥಿಗಳಿಂದ ಅಮೋಘ ರೀತಿಯಲ್ಲಿ ಮೆರವಣಿಗೆ ನಡೆಯಿತು.
ಶಬೀರ್ ಎಡಪಾಲ ಸ್ವಾಗತಿಸಿ ವಿದ್ಯಾರ್ಥಿ ಸಂಘಟನೆ ಶಮ್ಸ್ ಇದರ ಅಧ್ಯಕ್ಷರಾದ ಸೈಯ್ಯಿದ್ ಮಹಮ್ಮದ್ ಅಲಿ ಅಲ್-ಹಾದಿ ತಂಙಳ್ ಅವರು ಕಾರ್ಯಕ್ರ ನಿರೂಪಿಸಿ ಧನ್ಯವಾದಗಳು ನಡೆಸಿದರು.