Latest Posts

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ), ಶಾಬಾಬ್ ವಿಂಗ್ಸ್ ಹಾಗು ಹೆಲ್ಪಿಂಗ್ ಹ್ಯಾಂಡ್ಸ್ ವಾಟ್ಸಾಪ್ ಗ್ರೂಪ್ ಜಾಲ್ಸೂರ್ ಅಡ್ಕಾರ್ ಹಾಗೂ ಇದರ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ.

ಸುಳ್ಯ(ಜನವರಿ 30): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ, ಶಾಬಾಬ್ ವಿಂಗ್ಸ್ ಹಾಗು ಹೆಲ್ಪಿಂಗ್ ಹ್ಯಾಂಡ್ಸ್ ವಾಟ್ಸಾಪ್ ಗ್ರೂಪ್ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 30 ಜನವರಿ 2021 ನೇ ಶನಿವಾರದಂದು ಜಾಲ್ಸೂರಿನ ಎಂ.ಜೆ.ಎಂ ಮದರಸ ಮರ್ಹೂಂ ರಿಫಾಯಿ ವೇದಿಕೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಜನಾಬ್: ಇಬ್ರಾಹಿಂ ಕದಿಕಡ್ಕ (ಅಧ್ಯಕ್ಷರು ಎಂ.ಜೆ.ಎಂ ಜಾಲ್ಸೂರ್,ಅಡ್ಕಾರ್) ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮವನ್ನು ಜನಾಬ್:ಕಯ್ಯೂಮ್ ಮಾನ್ಯ (ಸ್ಥಾಪಕರು ಅಭಯಂ ಚಾದಿಟೇಬಲ್ ಟ್ರಸ್ಟ್ ಕೇರಳ) ಉಧ್ಘಾಟಿಸಿದರು.

ಬಹು: ಅಬೂಬಕರ್ ಫೈಝಿ ಕುಂಬಡಾಜೆ(ಮುದರ್ರಿಸ್ ಎಂ.ಜೆ.ಎಂ ಜಾಲ್ಸೂರು ಅಡ್ಕಾರ್) ದುಃವಾಶೀರ್ವಚ ನೀಡಿದರು.

ಕಾರ್ಯಕ್ರಮದಲ್ಲಿ ಎಂ.ಬಿ ಸದಾಶಿವ,ಇಕ್ಬಾಲ್ ಬೆಳ್ಳಾರೆ,ಸುಧಾಕರ್ ರೈ,ಇಕ್ಬಾಲ್ ಕನಕಮಜಲ್,ಜಿ.ಎಂ ಉಸ್ಮಾನ್,ಜಿ.ಪಿ ಸಂಶುದ್ದೀನ್,ಹುಸೈನ್ ಜಾಸ್ಮಿನ್ ಬಜಾರ್,ಮಜೀದ್ ಅಡ್ಕಾರ್,ಅಬ್ದುಲ್ಲಾ ಪಿ.ಎಂ,ಎನ್.ಎ ಮುಹಮ್ಮದ್ ಕುಂಞ,ಫೈಝಲ್ ಕಟ್ಟೆಕ್ಕಾರ್,ಆಶಿಕ್ ಸುಳ್ಯ,ಇಫಾಝ್ ಬನ್ನೂರು,ಅಶ್ರಫ್ ಅಡ್ಕಾರ್,ಬಶೀರ್ ADCO,ನೌಫಲ್ ಸಹದಿ ಜಾಲ್ಸೂರು,ಬಶೀರ್ ಅಲ್-ಅಸ,ಅಲಿ ಕತಾರ್,ಜುನೈದ್ ಅಡ್ಕಾರ್,ಎ.ಎಂ ಅಬ್ಬಾಸ್,ಇಬ್ರಾಹಿಂ ಶ್ರಂಗಾರ್ ಫ್ಯಾನ್ಸಿ,ಹಮೀದ್ ಅಡ್ಕಾರ್,ಅಬ್ದುಲ್ ರಹಿಮಾನ್ ಅಡ್ಕಾರ್ ಹಾಗೂ ಬ್ಲಡ್ ಹೆಲ್ಪ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 53 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಜಾಲ್ಸೂರಿನ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

Share this on:
error: Content is protected !!