ಮಂಗಳೂರು : ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ಅವರು ನೇರವಾಗಿ ನಡೆಸುತೇತಿರುವ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ವತಿಯಿಂದ ಇಂಡಿಯಾನ್ ಮುಸಲ್ಮಾನರ ನಾಯಕ ಪಾಣಕ್ಕಾಡ್ ಅಸ್ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಅನುಸ್ಮರಣಾ ಮಹಾ ಸಮ್ಮೇಳನವು 01 ಮಾರ್ಚ್ 2021 ನೇ ಸೋಮವಾರದಂದು ಮಗ್ರಿಬ್ ನಮಾಜಿನ ಬಳಿಕ ಮಿತ್ತಬೈಲಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ಪ್ರಭಾಷಣಗಾರ ಅಹ್ಮದ್ ಕಬೀರ್ ಬಾಖವಿ ಕೊಲ್ಲಂ ಭಾಷಣಗೈಯ್ಯಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 01 ಕ್ಕೆ ಅಂತರಾಷ್ಟ್ರೀಯ ಭಾಷಣಗಾರ ಅಹ್ಮದ್ ಕಬೀರ್ ಬಾಖವಿ ಮಿತ್ತಬೈಲಿಗೆ
