ಹಳೆಯಂಗಡಿ: ಮುಹೀಯ್ಯದ್ದಿನ್ ಜುಮಾ ಮಸೀದಿ ಬೊಳ್ಳೂರು ಇದರ ಉಪಸಮಿತಿಯಾಗಿ ನೂತನ ಗಲ್ಫ್ ಸಮೀತಿ ಆಯ್ಕೆಯು ಸೌದಿ ಅರೆಬಿಯಾದ ಜುಬೈಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಅನೀಸ್ ಅಹ್ಮದ್ ಬೊಳ್ಳೂರು ಇವರು ಕಿರಾಅತ್ ಮೂಲಕ ಉದ್ಘಾಟಿಸಿ ಗಲ್ಫ್ ಸಮೀತಿ ಅಗತ್ಯತೆ ಮತ್ತು ನೂತನ ಯೋಜನೆಗಳ ಕುರಿತು ವಿವರಿಸಿದರು.
2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನೀಸ್ ಹುಸೈನ್ ಬೊಳ್ಳೂರು ಇವರನ್ನು ಆಯ್ಕೆ ಮಾಡಲಾಯಿತು

ಉಪಾಧ್ಯಕ್ಷರಾಗಿ ಎ.ಕೆ ಕಬೀರ್,ಪ್ರಧಾನ ಕಾರ್ಯದರ್ಶಿಯಾಗಿ ಎ.ಕೆ ಸಿರಾಜುದ್ದಿನ್, ಜೊತೆ ಕಾರ್ಯದರ್ಶಿಯಾಗಿ ಸಿನಾನ್ ರೈಲ್ವೆಗೇಟ್ ಮತ್ತು ಝಮೀರ್ ಕೊಪ್ಪಳ, ಗಲ್ಫ್ ಸಮೀತಿ ಕೋ ಆರ್ಡಿನೇಟರ್ ಆಗಿ ಕಲಂದರ್ ಪರಂಗಿಬೊಟ್ಟು ಇವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
