Latest Posts

ನೂತನ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ಹರೇಕಳಕ್ಕೆ ಭೇಟಿಕೊಟ್ಟ ಸಮಾಜಸೇವಕ ಡಾ.ಅಬ್ದುಲ್ ಶಕೀಲ್ -ಇದು ಬುತ್ತಿ ನಿಸಾರ್ ಅವರ ಕನಸಿನ ತಾಜ್ ಮಹಲ್..

✍🏻 MNG Foundation

ಸಮಾಜಸೇವಕ ಡಾ.ಅಬ್ದುಲ್ ಶಕೀಲ್ ದೇರಳಕಟ್ಟೆ ತನ್ನನ್ನು ಜಿಲ್ಲೆಯಾದ್ಯಂತ ಬಿಡುವಿಲ್ಲದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲೆಡೆಯಿಂದ ಜನರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಡಾ.ಅಬ್ದುಲ್ ಶಕೀಲ್ ತನ್ನ ಈ ಕಿರಿ ವಯಸ್ಸಿನಲ್ಲಿ ಜಿಲ್ಲೆಯ ಜನರ ನಡುವೆ ಇಷ್ಟೊಂದು ಪ್ರಸಿದ್ಧಿ ಪಡೆಯಲು ಅವರಲ್ಲಿರುವ ಸಾಮಾನ್ಯ ವ್ಯಕ್ತಿತ್ವ ಗುಣ, ಸೇವಾ ಗುಣಗಳು ಮತ್ತು ಇನ್ನಿತರ ಹಲವು ವ್ಯಕ್ತಿ ಗುಣಗಳು ಸೇರಿಕೊಂಡಿವೆ.

ದೇಶವಿದೇಶಗಳಲ್ಲಿ ಹಲವಾರು ಸಮಾಜಸೇವಾ ಸಂಘ ಸಂಸ್ಥೆಗಳ ಜೊತೆ ಗುರುತಿಸಿಕೊಂಡು ನಿರಂತರವಾಗಿ ಜನರ ಕಷ್ಟಗಳಿಗೆ ಮಿಡಿಯುತ್ತಿದ್ದಾರೆ.
ಹಲವು ಧಾರ್ಮಿಕ ವಿಧ್ಯಾ ಸಂಸ್ಥೆಗಳ ಭಾಗವಾಗಿರುವ ಡಾ.ಶಕೀಲ್ ಅವರು ತನ್ನನ್ನು ಸಮುದಾಯ ಸೇವೆಯಲ್ಲೂ ಸಕ್ರಿಯವಾಗಿಸಿದ್ದಾರೆ.

ಇವರೊಬ್ಬ ಸ್ಪೂರ್ತಿದಾಯಕ ಮಾತುಗಾರ, ಹಲವು ವಿಧ್ಯಾಸಂಸ್ಥೆಗಳಲ್ಲಿ ಈಗಾಗಲೇ ಅಲ್ಲಿನ ವಿಧ್ಯಾರ್ಥಿಗಳಿಗೆ ನಿರಂತರವಾಗಿ ಸಮುದಾಯದ ಶೈಕ್ಷಣಿಕ ಸಬಲೀಕರಣದ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡುತ್ತಾ ಸಮುದಾಯದ ಮುಂದಿನ ಭವಿಷ್ಯವನ್ನು ರೂಪುಗೊಳಿಸುವಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ.

ನೂರಾರು ಬಡ ಅನಾಥ ವಿಧ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಸದ್ದಿಲ್ಲದೆ ಹೊತ್ತುಕೊಂಡವರಾಗಿದ್ದಾರೆ ಡಾ.ಶಕೀಲ್.
ಒಬ್ಬ ನೈಜ ಒಂದು ಸಮುದಾಯ ನಾಯಕನಿಗೆ ಇರಬೇಕಾದಂತಹ ಎಲ್ಲಾ ಗುಣವು ಡಾ.ಶಕೀಲ್ ಅವರಲ್ಲಿದೆ.
ಮುಂದೆ ಜಿಲ್ಲೆಯ ಯಶಸ್ವಿ ಸಮುದಾಯ ನಾಯಕರ ಹೆಸರುಗಳ ನಡುವೆ ಅಬ್ದುಲ್ ಶಕೀಲ್ ಅವರ ಹೆಸರು ಮಂಚೂಣಿಯಲ್ಲಿರುವಂತಾಗಲಿ.

ಇವರು ಕಳೆದ ಲಾಕ್ ಡೌನ್ ಸಂಧರ್ಭದಲ್ಲಿ ನೊಂದ ಬಡ ಕುಟುಂಬಗಳನ್ನು ಗುರುತಿಸಿ ಜಿಲ್ಲೆಯಾದ್ಯಂತ ಸರಿಸುಮಾರು 1500 ಕ್ಕೂ ಮಿಕ್ಕಿದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಸಿ ಬಡ ನಿರ್ಗತಿಕರ ಪಾಲಿಗೆ ಆಶಾಕಿರಣವಾಗಿದ್ದು ನಮ್ಮ ಯುವ ಸಮೂಹಕ್ಕೆ ಮಾದರಿ.
ಇಂದಿಗೂ ಪ್ರತಿ ತಿಂಗಳು ನೂರಕ್ಕೂ ಅಧಿಕ ಜೀವನಾಧಾರ ಇಲ್ಲದ ಬಡ ಯತೀಮ್ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ತಲುಪಿಸುತ್ತಿದ್ದಾರೆ.

ಹಾಗೂ ಕೊರೋನ ಸಂಕಷ್ಟ ಕಾಲದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದ ಹಲವರನ್ನು ಸ್ವಂತ ಖರ್ಚಿನಲ್ಲಿ ಯಶಸ್ವಿಯಾಗಿ ತವರೂರಿಗೆ ತಲುಪಿಸಿ ಕುಟುಂಬಗಳ ಕಣ್ಣೀರು ಒರೆಸಿದ್ದು ಇವರ ಮಹತ್ವಾಕಾರ್ಯಗಳಲ್ಲಿ ಒಂದಾಗಿದೆ.
ಇವರು ತನ್ನ ಮುಂದೆ ಕಷ್ಟಗಳನ್ನು ತೋರ್ಪಡಿಕೊಂಡು ಬಂದವರನ್ನು ಬರಿಗೈಯ್ಯಲ್ಲಿ ಕಳುಹಿಸಿದ್ದಿಲ್ಲ.
ಇವರೊಬ್ಬ ಯಶಸ್ವಿ ಉದ್ದಮಿ ಕೂಡ ಹೌದು.
ಈ ಹಿಂದೆ ಇವರಿಗೆ ಅರ್ಹವಾಗಿ ಪ್ರತಿಷ್ಠಿತ ಯುನಿವರ್ಸಿಟಿ ಒಂದರಿಂದ ಡಾಕ್ಟರೇಟ್ ಪದವಿ ಕೂಡ ಒಲಿದು ಬಂದಿತ್ತು.
ಇತರರ ಸೇವೆಗೈಯ್ಯುವ ಇವರ ಜೊತೆ ದೇವರ ಅಪಾರ ಅನುಗ್ರಹವು ಕೂಡ ಸೇರಿಕೊಂಡಿದೆ ಅವರ ಯಶಸ್ಸಿನ ಪಥಗಳೇ ಸಾಕ್ಷಿ.

ಕಳೆದ ವರ್ಷ ಹರೇಕಳ ಗ್ರಾಮದ ನಿಸಾರ್ ಎಂಬ ವ್ಯಕ್ತಿಯು ತನ್ನ ಕೈ ನೋವಿನ ಪರಿಣಾಮ ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ ಮಸೀದಿಯ ಗುರುಗಳಿಗೆ ಮನೆ ಮನೆಗಳಿಂದ ಬುತ್ತಿ (ಆಹಾರ) ತೆಗೆದುಕೊಂಡು ಹೋಗುತ್ತಾ, ಒಂದು ಶೌಚಾಲಯ ಕೂಡ ಇಲ್ಲದ ಕೇವಲ 800 ರೂಪಾಯಿ ಮಾಸಿಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಿಸಾರ್ ಕುಟುಂಬದ ಬಹಳ ಶೋಚನೀಯ ಪರಿಸ್ಥಿತಿಯನ್ನು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯು ದಾನಿಗಳ ಮುಂದಿಟ್ಟಿತ್ತು.

ಅದರಂತೆ ಸಹೃದಯಿ ದಾನಿಗಳ ಸಹಾಯದಿಂದ ಮನೆಯು ಗೋಡೆ ನಿರ್ಮಾಣ ಹಂತಕ್ಕೆ ತಲುಪಿತ್ತು.
ಸಂಗ್ರಹವಾದ ಮೊತ್ತದಿಂದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗದೆ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದೆವು.
ಅದರಂತೆ ಕೆಲ ದಿನಗಳ ಹಿಂದೆ ನಮ್ಮ ಸಂಸ್ಥೆಯ ನಿಯೋಗವು ಡಾ.ಅಬ್ದುಲ್ ಶಕೀಲ್ ದೇರಳಕಟ್ಟೆ ಅವರನ್ನು ಭೇಟಿಯಾಗಿ ಈ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಿದಾಗ ಆ ಕೂಡಲೇ ಸ್ಪಂದಿಸಿದ ಶಕೀಲ್ ಅವರು ಒಂದೊಳ್ಳೆಯ ದೊಡ್ಡ ಮೊತ್ತವನ್ನು ನೇರವಾಗಿ ಬುತ್ತಿ ನಿಸಾರ್ ಅವರ ಖಾತೆಗೆ ಜಮಾವಣೆ ಮಾಡಿ ಮನೆ ನಿರ್ಮಾಣ ಕಾರ್ಯಕ್ಕೆ ಮತ್ತೆ ಚಾಲನೆ ಇಡುವಲ್ಲಿ ಮುನ್ನುಡಿ ಬರೆದು ಬುತ್ತಿ ನಿಸಾರ್ ಅವರಿಗೆ ಆಸರೆಯಾಗಿದ್ದಾರೆ.
ಅದರಂತೆ ಇಂದು ಯಶಸ್ವಿಯಾಗಿ ಮನೆಯ ಕಾಂಕ್ರೀಟ್ ಕೆಲಸ ಚಾಲನೆಗೊಂಡಿದೆ.
ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಸರಿಯಾಗಿ ಡಾ.ಅಬ್ದುಲ್ ಶಕೀಲ್ ಅವರು ಹರೇಕಳ ಮನೆ ನಿರ್ಮಾಣ ಸ್ಥಳಕ್ಕೆ ಭೇಟಿಕೊಟ್ಟು ಕೆಲ ಸಮಯ ಸಂಸ್ಥೆಯ ಪದಾಧಿಕಾರಿಗಳ ಜೊತೆ ಕಾಂಕ್ರೀಟಿಕರಣ ವೀಕ್ಷಿಸಿದರು. ಹಲವಾರು ಸಲಹೆ ಸೂಚನೆಗಳನ್ನು ನೀಡಿ ಅವರ ಅಮೂಲ್ಯವಾದ ಸಮಯವನ್ನು ಪದಾಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಕಳೆದರು.
ಬುತ್ತಿ ನಿಸಾರ್ ಅವರ ಜೊತೆ ಮಾತುಕತೆ ಕುಶಲೋಪಕಾರಿ ಮಾತುಗಳನ್ನಾಡಿ ಭರವಸೆಯ ಮಾತುಗಳೊಂದಿಗೆ‌ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತದ್ದು ನಿಜಕ್ಕೂ ಶ್ಲಾಘನೀಯ.
ಬುತ್ತಿ ನಿಸಾರ್ ಅವರ ಹಳೆಯ ಜೋಪಡಿ ಮನೆಗೆ ಭೇಟಿಕೊಟ್ಟು ಕೆಲಹೊತ್ತು ಮಾತುಕತೆ ನಡೆಸಿ ಮುಂದಿನ ಕೆಲ ಯೋಜನೆಗಳಿಗೆ ಜೊತೆಯಾಗಿ ನಿಲ್ಲುವೆ ಎಂಬ ದೃಢ ಆಶ್ವಾಸನೆಯನ್ನು ನೀಡಿದರು.

ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ಬುತ್ತಿ ನಿಸಾರ್ ಮನೆ ನಿರ್ಮಾಣ ಕಾರ್ಯದಲ್ಲಿ ನಮ್ಮ ಸಂಸ್ಥೆಯ ಮೇಲೆ ಪ್ರೀತಿಯಿಟ್ಟು ಕೈ ಜೋಡಿಸಿದ ಶಕೀಲ್ ಅವರ ಮಾನವೀಯ ಮೌಲ್ಯಕ್ಕೆ ಸಂಸ್ಥೆಯು ಚಿರಋಣಿ ಹಾಗೂ ಸದಾ ಅಭಾರಿ.
ಲಾಕ್ ಡೌನ್ ಸಂಧರ್ಭದಲ್ಲಿ ಕೂಡ ಇವರು ನಮ್ಮ ಸಂಸ್ಥೆಗೆ ಸಾಕಷ್ಟು ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ನೀಡಿರುವುದನ್ನು ನೆನೆಸುತ್ತೇವೆ.

ಇಂದು ಅರ್ಹವಾಗಿ ರಾಷ್ಟ್ರೀಯ ಪ್ರಮುಖ ರಾಜಕೀಯ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸುವ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
ಸಮುದಾಯದ ಪರ ಸಮಾಜದ ಪರ ಇನ್ನಷ್ಟು ಸೇವೆಗೈಯ್ಯಲು ದೇವರು ಶಕ್ತಿ ನೀಡಲಿ.

Share this on:
error: Content is protected !!