Latest Posts

ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು

ಹಳೆಯಂಗಡಿ: (ಮಾ,06 ) ಮುಹಿಯುದ್ದೀನ್ ಜುಮಾ ಮಸೀದಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿಯ 38 ವಾರ್ಷಿಕ ವಿಜೃಂಭಣೆ ಯಿಂದ ನಡೆಯಿತು.
ಬೊಳ್ಳೂರಿನ ಮುಹಿಯುದ್ದಿನ್ ಜುಮ್ಮಾ ಮಸೀದಿಯ ಆದೀನದಲ್ಲಿ ಪ್ರತೀ ವರ್ಷ ನಡೆಸಿ ಬರುವ ‘ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಇದರ 38 ನೇ ವಾರ್ಷಿಕ ರಿಫಾಯ್ಯಿ ಧಫ್ಫ್ ರಾತಿಬ್ ಮತ್ತು ದಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಮೊದಲನೇ ದಿನದ
ಕಾರ್ಯಕ್ರಮವನ್ನು ಉದ್ಘಾಟನೆ ಗೈದ ಬೊಳ್ಳೂರು ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜಿ ಮುಹಮ್ಮದ್ ಅಝ್ಹರ್ ಫೈಝಿ ಆಶಿರ್ವಚನ ನೀಡುತ್ತಾ ಮಾತನಾಡಿದ ಅವರು ಶೈಖುನಾ ಅಹಮದುಲ್ ಖಬೀರ್ ರಿಫಾಯ್ಯಿ ಅವರ ಅನುಸ್ಮರಣೆ ನಮಗೆಲ್ಲ ಮಾದರಿ ಆಗಲಿ ಹಾಗು ಮಾರಕ ರೋಗ ರೂಪಾಂತರ ಕೋವಿಡ್ ನಾಡಿಗೆ ಪಸರಿಸಿದ್ದರಿಂದ ನಿಯಾಮಾವಳಿಗಳನ್ನು ಪಾಲಿಸಿ ಜನತೆ ಆದಷ್ಟು ಜಾಗ್ರತರಾಗಬೇಕಾಗಿ ಕರೆ ಕೊಟ್ಟರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಮಧ್ಯಾಹ್ನ ಧಫ್ ಕಮಿಟಿಯ ಸಭಾಂಗಣದಲ್ಲಿ ನಡೆದ ದಫ್ಫ್ ರಾತೀಬ್ ಕಾರ್ಯಕ್ರಮವುದ ನೇತೃತ್ವ ವನ್ನು ಹಸನ್ ಮುಸ್ಲಿಯಾರ್ ಹಾಗೂ ಉಸ್ತಾದರುಗಳಾದ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಸುಳ್ಯ ಹಾಜಿ ಪಂಡಿತ್ ಬಿ.ಎ ಇದ್ದಿನಬ್ಬ ತೋಡಾರು ಇವರುಗಳ ಉಪಸ್ಥಿತಿಯಲ್ಲಿ ರಿಪಾಯ್ಯೀಯ ಧಫ್ ರಾತೀಬ್ ಕಾರ್ಯಕ್ರಮ ಜರಗಿತು.

ದಫ್ಫ್ ರಾತೀಬ್ ಕಾರ್ಯಕ್ರಮ

ಮಗ್ರಿಬ್ ನಮಾಝಿನ ಬಳಿಕ ಸಮಾರೂಪ ಸಮಾರಂಭದ ಅಧ್ಯಕ್ಷತೆ ಯನ್ನು ಬೊಳ್ಳೂರು ಉಸ್ತಾದ್ ನೆರೆವೇರಿಸಿದರು. ಶೈಖುನಾ ಅಲ್ ಹಾಜಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ಯುವಜನತೆ ಸಜ್ಜನಿಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೊಬ್ಬರನ್ನು ನೋಯಿಸುವ ಅಥವ ನಮ್ಮೊಳಗೆ ಭಿನ್ನತೆ ಸೃಷ್ಟಿಯಾಗುವ ವಿಚಾರಗಳಿಂದ ಪ್ರತಿಯೊಬ್ಬರೂ ದೂರ ಉಳಿಯಬೇಕು, ಸತ್ಕಾರ್ಯಗಳಿಂದ ನಮ್ಮ ಹೃದಯ ಪ್ರಕಾಶಿಸುತ್ತಿರಬೇಕು ಎಂದು ಹೇಳಿದರು.

ಶೈಖುನಾ ಅಲ್ ಹಾಜಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮದ ಉದ್ಘಾಟಿನೆ ನಡೆಸಿದ ದ್ರಶ್ಯ

ಬಳಿಕ ಆಗಮಿಸಿದ “ಅಸಯ್ಯಿದ್ ಅಲಿಯಾರ್ ತಂಙಳ್” ದುವಾಃ ಆಶಿರ್ವಚನ ನೀಡಿ ಮಾತನಾಡಿದ ಅವರು ಯಾವುದೇ ಸತ್ಕರ್ಮಗಳನ್ನು ಮಾಡುವಾಗಲೂ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರೆ ಮಾತ್ರ ಅದನ್ನು ಸೃಷ್ಠಿಕರ್ತನು ಸ್ವೀಕರಿಸುತ್ತಾನೆ, ನಮ್ಮ ಪೂರ್ವಕರು ಧರ್ಮದ ಎಲ್ಲಾ ಕಟ್ಟುಪಾಡುಗಳನ್ನು ಬಹಳ ಶ್ರದ್ಧೆಯಿಂದ ನೆರವೇರಿಸುತ್ತಿದ್ದರು, ಅದನ್ನೇ ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು. , ‘ಸದರ್ ಮುಅಲ್ಲಿಂ ನಾಸೀರ್ ಮುಸ್ಲಿಯಾರ್’ ಸ್ವಾಗತ ಭಾಷಣ ಮಾಡಿದರು.
ಕಾರ್ಯಕ್ರಮದ ಮುಖ್ಯ ಪ್ರಭಾಷಣೆ ಯನ್ನು ಹಾಜಿ ಸಿರಾಜುದ್ದೀನ್ ಫೈಝಿ, ಖತೀಬರು ಜುಮ್ಮಾ ಮಸೀದಿ ಮಾಡನ್ನೂರು ನಡೆಸಿದರು. ಹಾಗೂ ವಿಶೇಷ ಅತಿಥಿಗಳಾಗಿ ಕೆ.ಎಚ್ ಅಬ್ದುಲ್ ರಹಿಮಾನ್ ಫೈಝಿ ಕದಿಕೆ, ಆದಂ ಅಮಾನಿ ಪಕ್ಷಿಕೆರೆ, ಇ.ಯಂ. ಅಬ್ದುಲ್ಲಾ ಮದನಿ ಪಾತೂರು, ಸಾಗ್. ಸದರ್ ಮುಅಲ್ಲಿಂ ಹನೀಫ್ ದಾರಿಮಿ ಅಂಕೋಲ, ಇಸ್ಮಾಯಿಲ್ ಮದನಿ, ಸಂತಕಟ್ಟೆ, ಬೊಳ್ಳೂರು ಮದರಸ ಶಿಕ್ಷಕರಾದ ಸಿರಾಜುದ್ದೀನ್ ಫೈಝಿ, ರಿಯಾಝ್ ಫೈಝಿ, ಶಂಸುದ್ದೀನ್ ಕಟಾಪುಣಿ, ಬಿ.ಇ.ಮುಹಮ್ಮದ್, ಹನೀಫ್ ಐಎಕೆ, ಬಿ.ಎಂ.ಸುಲೈಮಾನ್ ಹಾಜಿ ಬಿ.ಎಚ್ ಅಬ್ದುಲ್ ಕಾದರ್ ಎ.ಕೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಂ. ಅಬ್ದುಲ್ ಕಾದರ್, ಅಬ್ದುಲ್ ಅಝೀಝ್ ಐ.ಎ.ಕೆ ಅಧ್ಯಕ್ಷರು ಲಿಯಾವುಲ್ ಇಸ್ಲಾಂ ಧಫ್ ಕಮಿಟಿ, ಉಪಾಧ್ಯಕ್ಷರಾದ ಯೂಸುಫ್ ಹೈದರ್ ಪದ್ಮನೂರು, ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಹಾಗು ಉಮ್ಮರ್ ಫಾರೂಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತ್ವಯ್ಯುಬ್ ಫೈಝಿ ಬೊಳ್ಳೂರು ‘ ಕಾರ್ಯಕ್ರಮ ನಿರೂಪಿಸಿ ಮೊಯಿದೀನ್ ಇಂದಿರಾನಗರ ವಂದಿಸಿದರು.

ವರದಿ: ಅದ್ದಿ ಬೊಳ್ಳೂರು

Share this on:
error: Content is protected !!