ಸುರತ್ಕಲ್ : ಎಸ್.ಕೆ.ಜೆ.ಎಂ ಸುರತ್ಕಲ್ ರೇಂಜ್ ವತಿಯಿಂದ ರೇಂಜ್ ಮೀಟ್ ಹಾಗೂ ಎಸ್.ಕೆ.ಎಸ್.ಬಿ.ವಿ ಜಲ ಸಂರಕ್ಷಣಾ ಅಭಿಯಾನ ಉದ್ಘಾಟನ ಕಾರ್ಯಕ್ರಮ ಇಂದು ಶಾಫಿ ಜುಮಾ ಮಸೀದಿ ಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಫೈಝಲ್ ಅನ್ಸಾರಿ ಕಿರಾಅತ್ ಪಠಿಸಿದರು. ಸ್ವಾಗತ ಭಾಷಣವನ್ನು ರೇಂಜ್ ಪ್ರಧಾನ ಕಾರ್ಯದರ್ಶಿ ಹನೀಫ್ ದಾರಿಮಿ ಇಡ್ಯಾ ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ರೇಂಜ್ ಅಧ್ಯಕ್ಷರಾದ ಅಬ್ದುಲ್ಲಾ ದಾರಿಮಿ ವಹಿಸಿದ್ದರು. ರೇಂಜ್ ಮೀಟ್ ಕಾರ್ಯಕ್ರಮದ ಉದ್ಘಾಟನೆ ಯನ್ನು ರೇಂಜ್ ಉಪಾಧ್ಯಕ್ಷರಾದ ಅಬೂಬಕ್ಕರ್ ಮದನಿ ಸಂತಕಟ್ಟೆ ನೆರೆವೆರಿಸಿದರು.

ಉದ್ಘಾಟನೆ ಅಬೂಬಕ್ಕರ್ ಮದನಿ
ಸಂತಕಟ್ಟೆಕಾರ್ಯಕ್ರಮದಲ್ಲಿ ವಿಷಯ ಮಂಡನೆ ಯನ್ನು ಬಹುಮಾನ್ಯರಾದ ಮುದರಿಬ್ಬ್ ಉಸ್ತಾದ್ ಅಬೂಬಕ್ಕರ್ ರಿಯಾಝ್ ರಹ್ಮಾನಿ ನಿರ್ವಹಿಸಿದರು

ಅಬೂಬಕ್ಕರ್ ರಿಯಾಝ್ ರಹ್ಮಾನಿ
SKSBV ಸುರತ್ಕಲ್ ರೇಂಜ್ ವತಿಯಿಂದ ಜಲ ಸಂರಕ್ಷಣಾ ಅಭಿಯಾನದ ಉದ್ಘಾಟನೆಯನ್ನು ರೇಂಜ್ ಗೆ ಒಳಪಟ್ಟ ಎಲ್ಲಾ ಉಸ್ತಾದರಿಗೆ ತಂಪು ಪಾನಿಯ ನೀಡುವ ಮೂಲಕ ರೇಂಜ್ ಅಧ್ಯಕ್ಷರಾದ ಅಬ್ದುಲ್ಲ ದಾರಿಮಿ ಉದ್ಘಾಟಿಸಿದರು.

ಸುರತ್ಕಲ್ ರೇಂಜ್ SKSBV ಅಧೀನದಲ್ಲಿರುವ ಎಲ್ಲಾ ಶಾಖೆಗಳಲ್ಲಿ ಜಲ ಸಂರಕ್ಷಣೆ ಅಭಿಯಾನವನ್ನು ನಡೆಸಲು SKSBV ರೇಂಜ್ ಚೇರ್ಮ್ಯಾನ್ ತ್ವಯ್ಯಿಬ್ ಫೈಝಿ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಝಕ್ ಅಝ್ ಹರಿ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ Ak ಅಬ್ದುಲ್ ಖಾದರ್ ಹಾಜಿ ಕಾರ್ಯದರ್ಶಿಯಾದ ಹನೀಫ್ ಇಡ್ಯಾ ಹಾಗೂ ಮದ್ರಸ ಅಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ದಾವೂದ್ ಹನೀಫಿ ವಂದಿಸಿದರು.


