Latest Posts

ಬಿ.ಕೆ ಬಾಯ್ಸ್ ಆರ್ಟ್ಸ್ & ಸ್ಪೋಟ್ಸ್ ಕ್ಲಬ್ (ರಿ) ಬಂಗರಕೋಡಿ ಬೊಳಂತೂರು ವತಿಯಿಂದ ಯಶಸ್ವಿ ರಕ್ತದಾನ ಶಿಬಿರ

ಬಿ.ಕೆ ಬಾಯ್ಸ್ ಆರ್ಟ್ಸ್ & ಸ್ಪೋಟ್ಸ್ ಕ್ಲಬ್ (ರಿ) ಬಂಗರಕೋಡಿ ಬೊಳಂತೂರು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ 28 ಮಾರ್ಚ್ 2021 ರ ರಂದು ಎನ್. ಸಿ ರೋಡ್ ಜಂಕ್ಷನ್ ನಲ್ಲಿ ರಕ್ತದಾನ ಶಿಬಿರ ಹಾಗೂ ಗ್ರಾಮ ಪಂಚಾಯಿತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್: ಮುಸ್ತಫಾ ಬಂಗರಕೋಡಿ ವಹಿಸಿದ್ದರು

ಸದಸ್ಯರಾದ ಚಂದ್ರಸ ರೈ, ಅಶ್ರಫ್ ಶೆಡ್ಡ್, ಅನ್ಸಾರ್, ಬಿ. ಜಿ ಅಬ್ದುಲ್ ಹಮೀದ್ ಬಿ ರಫೀಕ್ ಪೀಟಿ ಮಾಸ್ಟರ್ ನಾರ್ಶ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ C. H ಅಬ್ದುಲ್ ರಝಾಕ್, ಮತ್ತು ಹಮೀದ್ ಸುರಿಬೈಲ್ ಹಾಗೂ 43 ನೇ ಬಾರಿ ರಕ್ತದಾನ ಮಾಡಿದ ಹರಿಸ್ ಕೊಕ್ಕಪುಣಿ ಇವರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಯಿತು, ಅಶ್ರಫ್ ಬೋಳಂತೂರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು

ರಕ್ತದಾನ ಶಿಬಿರದಲ್ಲಿ 133 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಗಳಾದರು.

ರಕ್ತದಾನ ಮಾಡಿದ ಸರ್ವ ದಾನಿಗಳಿಗೂ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ರಕ್ತನಿಧಿಯ ಸಿಬ್ಬಂದಿವರ್ಗಕ್ಕೆ ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಪದಾಧಿಕಾರಿಗಳಿಗೂ ಮಾಧ್ಯಮ ಪ್ರತಿನಿಧಿಗಳು ಹೃದಯಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತ ಇದ್ದೇವೆ

ವರದಿ:
ಬಿ.ಕೆ ಬಾಯ್ಸ್ ಆರ್ಟ್ಸ್ & ಸ್ಪೋಟ್ಸ್ ಕ್ಲಬ್ (ರಿ) ಬಂಗರಕೋಡಿ ಬೊಳಂತೂರು

Share this on:
error: Content is protected !!