ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮೊಂಟೆಪದವು

ಕೊಣಾಜೆ : ರಸ್ತೆ ಸುರಕ್ಷತಾ ಕಾರ್ಯಕ್ರಮದ ಭಾಗವಾಗಿ ಅಪಘಾತಗಳನ್ನು ತಡೆಯಲು ಮಂಗಳೂರು ಸಿಟಿ ಸಂಚಾರಿ ಪೊಲೀಸ್ ಅವರ ನೇತೃತ್ವದಲ್ಲಿ, ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಮೊಂಟೆಪದವು ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಯಿತು‌.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಆಗಮಿಸಿ,ಅಪಘಾತಗಳನ್ನು ತಡೆಯಲು ಸಂಘ ಸಂಸ್ಥೆಗಳು ಮುಂದೆ ಬಂದು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿರುವುದು ಆಭಿನಂದನಾರ್ಹ ಮುಂದೆ ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಆಶಿಸಿದರು‌‌‌. ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಂಟರ್ ಮೊಂಟೆಪದವು ಇದರ ಅಧ್ಯಕ್ಷರಾದ ಮ್ಯೊದಿನ್ ಕುಂಞಿ ಗುದುರು ಅಧ್ಯಕ್ಷತೆ ವಹಿಸಿದ್ದರು, ಬದ್ರಿಯಾ ಜುಮಾ ಮಸೀದಿ ಮೊಂಟೆಪದವು ಇದರ ಅಧ್ಯಕ್ಷರಾದ ಖಾದರ್ ಕಲಜೇರಿ ಅವರು ಉದ್ಘಾಟಿಸಿದರು‌. ಗ್ರಾಮ ಪಂಚಾಯತ್ ಸದಸ್ಯರೂ, ಊರಿನ ಹಿರಿಯ ನಾಗರಿಕರೂ, ಮತ್ತಿತ್ತರು ಉಪಸ್ಥಿತರಿದ್ದರು‌.

Share this on:
error: Content is protected !!