ಪುತ್ತೂರು: ತಿಂಗಳಾಡಿ ಸಮೀಪದ ಕಟ್ಟತ್ತಾರಿನಲ್ಲಿ ಮಳೆಗೆ ಕಂಪೌಂಡ್ ಕುಸಿತವಾದ ಸುದ್ದಿಯನ್ನು ತಿಳಿದು ತಕ್ಷಣ ಸ್ಥಳಕ್ಕೆ ದಾವಿಸಿ ಕೂಡಲೇ ತೆರವುಗೊಳಿಸಿ SKSSF ವಿಖಾಯ ತಂಡ ಮಾನವೀಯತೆ ಮೆರೆದಿದ್ದಾರೆ.

SKSSF ವಿಖಾಯ ತಿಂಗಳಾಡಿ ಕ್ಲಸ್ಟರ್ ಸದಸ್ಯರಾದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಹನೀಫ್ ಕೂಡುರಸ್ತೆ, ಬಾತಿಷಾ ಸುಲ್ತಾನ್ ಕೂಡುರಸ್ತೆ, ನಾಸಿರ್ ಕೂಡುರಸ್ತೆ, ಶಾನಿಫ್ ಕೂಡುರಸ್ತೆ, ಮಜೀದ್ ಕಟ್ಟತ್ತಾರು, ರೌಫ್ ಕಟ್ಟತ್ತಾರು, ಬುರ್ಹಾನ್ ಕಟ್ಟತ್ತಾರು, ಫಕ್ರುದ್ದೀನ್ ಕಟ್ಟತ್ತಾರು, ಸಬೀಲ್ ಕಟ್ಟತ್ತಾರು ಮತ್ತು ರಿಶಾನ್ ಕಟ್ಟತ್ತಾರು ಇನ್ನಿತರು ಸಹಕರಿಸಿದರು.