Latest Posts

ಮಂಗಗಳಿಗೆ ಬಾಳೆಹಣ್ಣು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಚಿಕ್ಕಮಗಳೂರು: ಕೊರೊನಾ ಲಾಕ್ಡೌನ್ ಕಾರಣದಿಂದ ರಾಜ್ಯದ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡುವುದು ಸ್ಥಗಿತವಾಗಿದೆ. ವಾಹನ ಸಂಚಾರ ಹಲವು ಭಾಗಗಳಲ್ಲಿ ವಿರಳವಾಗಿರುವುದರಿಂದ ಹಲವು ಭಾಗಗಳಲ್ಲಿ ಪ್ರವಾಸಿಗರು ನೀಡುವ ಆಹಾರವನ್ನೇ ಅವಲಂಬಿಸಿದ್ದ ಮಂಗಗಳು ಸೇರಿದಂತೆ ಹಲವು ಪ್ರಾಣಿಗಳು ಸಮಸ್ಯೆ ಎದುರಿಸಿದೆ.

ಇದನ್ನು ಮನಗಂಡ ಭಜರಂಗ ದಳ ಕಾರ್ಯಕರ್ತರು ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಹಣ್ಣುಗಳನ್ನು ನೀಡುವ ಕಾರ್ಯ ಮಾಡ್ತಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ.ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಲಾಕ್ಡೌನ್ ಹಿನ್ನೆಲೆ ವಾಹನ ಸಂಚಾರವಿಲ್ಲದೆ ಆಹಾರಕ್ಕಾಗಿ ಮಂಗಗಳು ಪರದಾಡುತ್ತಿದ್ದವು. ಇದನ್ನು ಮನಗಂಡ ಭಜರಂಗದಳ ಕಾರ್ಯಕರ್ತರು 1000 ಕೆ.ಜಿ ಬಾಳೆ ಹಣ್ಣುಗಳನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಮ್ಮ ವಾಹನ ನಿಲ್ಲಿಸಿ ಘಾಟ್ ನಲ್ಲಿ ಕೆಲಹೊತ್ತು ಮಂಗಗಳಿಗೆ ಹಣ್ಣು ನೀಡಿದರು.

Share this on:
error: Content is protected !!