Latest Posts

ಪರ್ಲಡ್ಕ : ಫಾಗಿಂಗ್ ಯಂತ್ರ ಹಸ್ತಾಂತರ

ಪುತ್ತೂರು: ಮಳೆಗಾಲದಲ್ಲಿ ‌ಸಾಂಕ್ರಮಿಕ ರೋಗಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಪ್ರದೇಶದಲ್ಲಿ ಫಾಗಿಂಗ್ ನಡೆಸಲು ಅಗತ್ಯ ಯಂತ್ರವನ್ನು ಎಸ್ ಕೆ ಎಸ್ ಎಸ್ ಎಫ್ ಪರ್ಲಡ್ಕ ವಿಖಾಯ ಸಮಿತಿಗೆ ಹಸ್ತಾಂತರಿಸಲಾಯಿತು.

ಪರ್ಲಡ್ಕದ ಅನಿವಾಸಿ ಉದ್ಯಮಿ ಯೊಬ್ಬರು ಕೊಡುಗೆ ನೀಡಿದ ಯಂತ್ರದ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಲಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ವಹಿಸಿದರು.ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ರಶೀದ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪರಿಸರ ಶುಚೀಕರಣದ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.ಈ ಮೂಲಕ ಆರೋಗ್ಯ ವಾತಾವರಣ ನಿರ್ಮಾಣ ಸಾಧ್ಯವೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ನಗರ ಸಭೆ ಆಯುಕ್ತ ಮದು ರವರು ಮಾತನಾಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕಾರ್ಯದಲ್ಲಿ ಸಾರ್ವಜನಿಕರು ಸಂಪೂರ್ಣ ವಾಗಿ ಸಹಕರಿಸಬೇಕು.ಈ ನಿಟ್ಟಿನಲ್ಲಿ ಯುವ ರಾಜಕಾರಣಿ , ನಗರಸಭೆ ಸದಸ್ಯ ರಿಯಾಝ್ ರವರು ಅಭಿನಂದನಾರ್ಹ ಕಾರ್ಯ ಗಳನ್ನು ಮಾಡುತ್ತಿದ್ದು,ಅವರ ಸಮಾಜ ಸೇವೆಗೆ ಎಲ್ಲರೂ ಸಹಕರಿಸಿ ಪ್ರಯೋಜನ ಪಡೆಯಬೇಕೆಂದರು.

ಅನಿವಾಸಿ ಉದ್ಯಮಿ ಹಾರಿಸ್ ದರ್ಬೆ, ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ ಯಂತ್ರವನ್ನು ಸ್ವೀಕರಿಸಿದರು.

ಅತಿಥಿಗಳಾಗಿ ಅನಿವಾಸಿ ಉದ್ಯಮಿ ಫೈರೋಝ್ ಪರ್ಲಡ್ಕ, ವಿಖಾಯ ವಲಯ ಸಮಿತಿ ನಾಯಕರಾದ ಮನ್ಸೂರ್ ಮೌಲವಿ, ಇಬ್ರಾಹಿಂ ಕಡವ, ಜಮಾಅತ್ ಕಮಿಟಿ ಜೊತೆ ಕಾರ್ಯದರ್ಶಿ ಫಾರೂಕ್ ನಿಶ್ಮ, ಸದಸ್ಯರಾದ ಬಶೀರ್ ಅಕ್ಕರೆ, ಇಬ್ರಾಹಿಂ, ಎಸ್ ಕೆ ಎಸ್ ಎಸ್ ಎಫ್ ಮುಖಂಡರಾದ ಸಿನಾನ್ ಪರ್ಲಡ್ಕ, ಹಾಫಿಳ್ ಪರ್ಲಡ್ಕ,ತುಫೈಲ್ ಪರ್ಲಡ್ಕ, ಹಾಗೂ ಶಂಸುದ್ದೀನ್ ಹಾಜಿ ಪರ್ಲಡ್ಕ ಉಪಸ್ಥಿತರಿದ್ದರು.ನಗರಸಭಾ ಕೌನ್ಸಿಲರ್ ರಿಯಾಝ್ ವಳತ್ತಡ್ಕ ಸ್ವಾಗತಿಸಿದರು.ಅನಿವಾಸಿ ಉದ್ಯಮಿ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Share this on:
error: Content is protected !!