Latest Posts

ರಿಕ್ಷಾ ಚಾಲಕರಿಗೆ ಮೂರು ಲೀಟರ್ ಉಚಿತ ಪೆಟ್ರೋಲ್ ವಿತರಿಸಿದ ಅನಿವಾಸಿ ಉದ್ಯಮಿ ಅಬ್ದುಲ್ಲಾ ಮದುಮೂಲೆ – SKSSF ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಅಭಿನಂದನೆ

ಲಾಕ್ ಡೌನ್ ನಿಂದಾಗಿ ಅತಂತ್ರರಾದ ನೂರಾರು ಅಟೋ ಚಾಲಕರಲ್ಲಿ ಮಂದಹಾಸ ಬೀರಿದ ಅನಿವಾಸಿ ಸಂಘಟನೆಯ ಮುಂಚೂಣಿ ನಾಯಕ, ಉದ್ಯಮಿ ಅಬ್ದುಲ್ಲಾ ಮದುಮೂಲೆ ಅವರಿಗೆ SKSSF ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಅಭಿನಂದನೆ

ಕೊರೋನ ಸಾಂಕ್ರಾಮಿಕ ಹರಡುವಿಕೆ, ಲಾಕ್ ಡೌನ್ ಗಳಿಂದ ಕಂಗೆಟ್ಟು ಸಂಕಷ್ಟದಲ್ಲಿರುವವ ನೂರಾರು ಅಟೋ ಚಾಲಕರಿಗೆ ಪೆರ್ಲ ಕುಡುಕೋಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ನಲ್ಲಿ ಜೂನ್ 14 ರಂದು 3ಲೀಟರ್ ಉಚಿತ ಪೆಟ್ರೋಲ್ ವಿತರಿಸಿ ಉದಾರತೆ ಮೆರೆದ ಅಬ್ದುಲ್ಲಾ ಮದುಮೂಲೆ ಅವರ ಸಮಯೋಚಿತ ಸಾಮಾಜಿಕ ಸೇವೆಗೆ SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲೀ ತಂಙಲ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸದಾ ಮಾದರಿ ಸಾಮಾಜಿಕ ಸೇವೆಗಳೊಂದಿಗೆ ಸಮುದಾಯದ ಅಭಿಮಾನವಾಗಿ ಮುಂದುವರಿಯುತ್ತಿರುವ ಅಬ್ದುಲ್ಲಾ ಮದುಮೂಲೆ ಅವರಿಗೆ ಸರ್ವ ಶಕ್ತನು ಆರೋಗ್ಯ ಮತ್ತು ದೀರ್ಘ ಆಯುಷ್ಯವನ್ನು ಅನುಗ್ರಹಿಸಲೀ ಎಂದು ಶುಭ ಹಾರೈಸಿದರು.

SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ
ವಿಖಾಯ ಕರ್ನಾಟಕ ಯುಎಇ ಸಮಿತಿ

Share this on:
error: Content is protected !!