ಬಂಟ್ವಾಳ.ಜೂ 16 :ಕೋವೀಡ್ 19 ಸೇವಾ ನಿರತ ಎಸ್ಕೆಎಸ್ಸಸ್ಸಫ್ ಆಯ್ದ ವಿಖಾಯ ಕಾರ್ಯಕರ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಫೈಝೀಸ್ ವತಿಯಿಂದ ಇಂದು ಮಿತ್ತಬೈಲಿನಲ್ಲಿ ರೇಶನ್ ಕಿಟ್ ನೀಡಲಾಯಿತು.ಎಸ್ಕೆಎಸ್ಸಸ್ಸಫ್ ಜಿಲ್ಲಾ ಸಮಿತಿ ಅಧ್ಯಕ್ಷ ಸಯ್ಯಿದ್ ಅಮೀರ್ ತಙಲ್ ಪ್ರಾರ್ಥಿಸಿದರು.ಇರ್ಶಾದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.

ಫೈಝೀಸ್ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ರಾಹ್ಮನ್ ಫೈಝಿ ಬಜಲ್ ಅಧ್ಯಕ್ಷತೆ ವಹಿಸಿದರು. ಕೇಂದ್ರ ಎಸ್ಕೆಎಸ್ಸಸ್ಸಫ್ ಕಾರ್ಯದರ್ಶಿ ಖಾಸಿಮ್ ದಾರಿಮಿ ಕಿನ್ಯ,
ಎಸ್ಕೆಎಸ್ಸಸ್ಸಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ,ಕೋಶಾಧಿಕಾರಿ ಹನೀಫ್ ಧೂಮಳಿಕೆ,ವರ್ಕಿಂಗ್ ಕಾರ್ಯದರ್ಶಿ ಆರೀಫ್ ಬಡಕಬೈಲು,ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಕಾದಿರ್, ವಿಖಾಯ ಜಿಲ್ಲಾ ಚಯರ್ಮಾನ್ ಇಸ್ಮಾಯಿಲ್ ತಙಲ್,ಕನ್ವೀನರ್ ಆಸಿಫ್ ಕಬಕ,ಕೋಡಿನೇಟರ್ ಮುಸ್ತಫ ಕಟ್ಟತ್ತಪಡ್ಪು ,ಫೈಝೀಸ್ ಜಿಲ್ಲಾ ಕಾರ್ಯದರ್ಶಿ ಶೈಖ್ ಮುಹಮ್ಮದ್ ಇರ್ಫಾನಿ,ಸಿದ್ದೀಕ್ ಫೈಝಿ ಕರಾಯ,ಹನೀಫೀಸ್ ರಾಜ್ಯ ಕಾರ್ಯದರ್ಶಿ ಶಂಸುದ್ದೀನ್ ಹನೀಫಿ ಉಪಸ್ಥಿತರಿದ್ದರು.
ಜಿಲ್ಲಾ ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಸ್ವಾಗತಿಸಿ ಧನ್ಯವಾದಗೈದರು.

