ಬಂಟ್ವಾಳ: ಬಂಟ್ವಾಳ ಗೂಡಿನಬಳಿಯಲ್ಲಿ ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ವಿಷಪೂರಿತ ಹಾವನ್ನು ಕಂಡು ಅಕ್ಕಪಕ್ಕದ ಮನೆಯವರು ಗಾಬರಿಗೊಂಡಿದ್ದರು. ಸ್ಥಳೀಯ ನಾಗರಿಕರು ಉರಗ ತಜ್ಞ ಜಬ್ಬಾರ್ ಅವರಿಗೆ ಸುದ್ದಿ ಮುಟ್ಟಿಸುತ್ತಾರೆ. ಆದರೆ ಮಳೆಗಾಲದಲ್ಲಿ ಸಂಪೂರ್ಣ ಗಿಡ ರಾಶಿಗಳು, ಪೊದೆಗಳು ದಟ್ಟವಾಗಿ ಬೆಳೆದದ್ದರಿಂದ ಅವರ ಪ್ರಯತ್ನ ವಿಫಲವಾಯಿತು. ಈ ಪರಿಸ್ಥಿತಿಯನ್ನು ಮನಗಂಡ ಗೂಡಿನಬಳಿ ಯುವ ಕಾಂಗ್ರೆಸ್ ಉಭಯ ವಾರ್ಡಿನ ಅಧ್ಯಕ್ಷರುಗಳಾದ ಅಮೀನ್ ಹಾಗೂ ರಿಝ್ವಾನ್ ನೇತೃತ್ವದ ಯುವಕರ ತಂಡ ಸಂಪೂರ್ಣ ಪರಿಸರವನ್ನು ಸ್ವಚ್ಚಗೊಳಿಸುವ ಮಹಾತ್ಕಾರ್ಯಕ್ಕೆ ಇಳಿಯುತ್ತಾರೆ.

ಇರ್ಷಾದ್ ಡ್ರೀಮ್ಸ್ ಅವರ ಸಹಯೋಗದಲ್ಲಿ ಇಡೀ ಪರಿಸರವನ್ನು ಸ್ವಚ್ಛಗೊಳಿಸಿದ್ದು ಊರಿನವರ ಪ್ರಶಂಸೆಗೆ ಪಾತ್ರವಾಗಿದೆ ಮಾತ್ರವಲ್ಲ ಅಕ್ಕಪಕ್ಕದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.