Latest Posts

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ವೀಣಾ ಭಟ್ ಅವರಿಂದ ರಮಾನಾಥ ರೈ ಭೇಟಿ

ಪುತ್ತೂರು : ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಭರಣ್ಯ ವೀಣಾ ಭಟ್ ಅವರು ಇಂದು ಮಾಜಿ ಸಚಿವ ಶ್ರೀ.ಬಿ.ರಮಾನಾಥ ರೈ ಅವರನ್ನು ಅವರ ಬಂಟ್ವಾಳದ ನಿವಾಸದಲ್ಲಿ ಭೇಟಿಯಾದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ನೂತನ ಕಾರ್ಯದರ್ಶಿಯಾಗಿ ನೇಮಕ ಗೊಂಡ ವೀಣಾ ಭಟ್ ಅವರನ್ನು ರೈಯವರು ಶಾಲು ಹೊದಿಸಿ ಗೌರವಿಸಿದರು. ಹಾಗೂ ಭರಣ್ಯ ವೀಣಾ ಭಟ್ ದಂಪತಿಗಳು ರೈವರನ್ನೂ ಶಾಲು ಹೊದಿಸಿ ಸನ್ಮಾನಿಸಿದರು.
ಪಕ್ಷದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ಮಾತುಕತೆ ನಡೆಸಿದರು.
ವೀಣಾ ಭಟ್ ರವರ ಪತಿ ಪ್ರವೀಣ್ ಭಟ್ ಭರಣ್ಯ, ಪುತ್ರಿ ಬಾಲ ನಟಿ ಸಂಹಿತ ಭಟ್, ಅನಿವಾಸಿ ಉದ್ಯಮಿ ಖಲಂದರ್ ಅಲಿ ಮಣ್ಣಾಪು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this on:
error: Content is protected !!