ಬಡಗನ್ನೂರು: ಜುಲೈ- 4 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮೈಂದನಡ್ಕ ಬೂತ್ ಸಮಿತಿ ವತಿಯಿಂದ ಹೊಸನಗರ ಮಸಿದಿ ಸಂಪರ್ಕಿಸುವ ರಸ್ತೆ ದುರಸ್ತಿಗೊಳಿಸುವ ಮೂಲಕ ಹಾಗು ಬಸ್ಸು ತಂಗುದಾನ ಹಾಗೂ ಸುತ್ತಮುತ್ತಲು ಸ್ವಚ್ಚತಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಮೈಂದನಡ್ಕ ಬೂತ್ ಸಮಿತಿ ಕಾರ್ಯಕರ್ತರು ಊರಿನ ಹಿರಿಯರು ನಾಳಿನ ಭರವಸೆಯ ಬೆಳಕಾದ ಪುಟ್ಟ ಮಕ್ಕಳು ಸಹಕಾರಿಸಿದರು ಎಸ್.ಡಿ.ಪಿ.ಐ ಯ ಈ ಒಂದು ಸ್ವಚ್ಚತಾ ಕಾರ್ಯವನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಅದೇ ರೀತಿ ಸ್ವಚ್ಚತೆ ಮಾಡುವಾಗ ಕಾರ್ಯಕರ್ತರಿಗೆ ಬಾಯಾರಿಕೆಗೆ ತಂಪು ಪಾನಿಯ ಹಾಗೂ ಚಹಾವನ್ನು ಗ್ರಾಮಸ್ಥರು ನೀಡಿ ಸಹಕರಿಸಿದರು.