Latest Posts

ಗೂಡಿನಬಳಿ ವಲಯ ಕಾಂಗ್ರೆಸಿಗೆ ನೂತನ ಸಾರಥ್ಯ                         ವಲಯ ಅಧ್ಯಕ್ಷರಾಗಿ ರಝಾಕ್ ಟಿ ಹಾಗೂ ವಾರ್ಡ್ 13 ಹಾಗೂa 14 ನೇ ಬೂತ್ ಅಧ್ಯಕ್ಷರಾಗಿ ಖಾಸಿಂ ಎಂ.ಕೆ ಹಾಗೂ ಸತ್ಯನಾರಾಯಣ ರಾವ್ ಆಯ್ಕೆ.       

ಬಂಟ್ವಾಳ : ಗೂಡಿನಬಳಿ 13 ಹಾಗೂ 14ನೇ ವಾರ್ಡಿಗೆ ವಲಯ ಕಾಂಗ್ರೆಸ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಜಬಲುನ್ನೂರ್ ಕಾಂಪ್ಲೆಕ್ಸ್ ನಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
ಆಯ್ಕೆ ಪ್ರಕ್ರಿಯೆಯನ್ನು ಹಿರಿಯ ಕಾಂಗ್ರೆಸ್ ಮುಖಂಡರಾದ ಕರೀಂ ಸುಪಾರಿ, ಸುಲೈಮಾನ್, ಸ್ವಾಲಿಹ್ ಹಾಗೂ ಇಸ್ಮಾಯಿಲ್ ಅವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ನೂತನವಾಗಿ ಗೂಡಿನಬಳಿ ವಲಯ ಮತ್ತು ಬೂತ್ ಮಟ್ಟದ ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಚಾಚರನ್ನು ಆಯ್ಕೆ ಮಾಡಲಾಯಿತು.
ವಾರ್ಡ್ 13 ಹಾಗೂ 14ರ ವಲಯ ಅಧ್ಯಕ್ಷರನ್ನಾಗಿ ರಝಾಕ್ ಟಿ ಅವರು ಆಯ್ಕೆಯಾದರು.
ವಲಯ ಪ್ರಧಾನ ಕಾರ್ಯದರ್ಶಿಯಾಗಿ ಫ್ರಾನ್ಸಿಸ್ ರವರು ಆಯ್ಕೆಯಾದರೆ ವಲಯ ಕೋಶಾಧಿಕಾರಿಯಾಗಿ ಮೊಹಮ್ಮದ್ ಖಾಸಿಂ ರವರನ್ನು ಆಯ್ಕೆ ಮಾಡಲಾಯಿತು.
13 ನೇ ವಾರ್ಡ್ ಬೂತ್ ಅಧ್ಯಕ್ಷರನ್ನಾಗಿ ಖಾಸಿಂ ಎಂ.ಕೆ ರವರು ಆಯ್ಕೆಯಾದರು.
ಬೂತ್ ಪ್ರಧಾನ ಕಾರ್ಯದರ್ಶಿಯಾಗಿ ಹಸನಾಕ ಹಾಗೂ ಕೋಶಾಧಿಕಾರಿಯಾಗಿ ಅಲೀಂ ರವರು ಆಯ್ಕೆಯಾದರು.
14 ನೇ ವಾರ್ಡಿನ ಬೂತ್ ಅಧ್ಯಕ್ಷರಾಗಿ ಸತ್ಯನಾರಾಯಣ ರಾವ್ ಅವರು ಆಯ್ಕೆಯಾದರು.
ಬೂತ್ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕಿನ್ನಿ ಹಾಗೂ ಕೋಶಾಧಿಕಾರಿಯಾಗಿ ರಹೀಂ ಕೈಕುಂಜೆ ಆಯ್ಕೆಯಾದರು.
ಕೊನೆಗೆ ಇಸ್ರಾರ್ ಗೂಡಿನಬಳಿ ಧನ್ಯವಾದ ಸಮರ್ಪಿಸಿದರು.
ಸಭೆಯಲ್ಲಿ ಊರಿನ ಹಿರಿಯರಾದ ಪ್ರಕಾಶ್, ಹಬ್ಬಿಖಾದರ್, ಶೆರೀಫ್, ಅಮೀನ್, ರಿಝ್ವಾನ್, ಮುಸ್ತ ಡ್ರೀಮ್ಸ್, ಆಸಿಫ್, ತೌಸೀಫ್, ಉಬೈದುಲ್ಲಾ, ಅನ್ಸಾರ್, ತೌಸೀಫ್ ಮಿಲನ್,ಸತ್ತಾರ್,ನಾಸಿರ್,ಇನಾಯತ್,ಸಾದಿಕ್, ಅಮ್ಮಿ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share this on:
error: Content is protected !!