Latest Posts

JDS ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಬೋಗೋಡಿ ರಫೀಕ್ ಕೊಚ್ಚಿ ತನ್ನ ಬೆಂಬಲಿಗರೊಂದಿಗೆ SDPI ಪಕ್ಷಕ್ಕೆ ಸೇರ್ಪಡೆ


ಬಂಟ್ವಾಳ,ಆ:೧:-ಇಂದು ಆದಿತ್ಯವಾರ‌ ಆಲಡ್ಕದಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಸದಸ್ಯತ್ವ ಅಭಿಯಾನದ ಪ್ರಯುಕ್ತ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಯುವ ನಾಯಕ,ಸಾಮಾಜಿಕ ಕಾರ್ಯಕರ್ತ ಹಾಗೂ ಜೆ.ಡಿ.ಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ರಫೀಕ್ ಕೊಚ್ಚಿ ಬೋಗೋಡಿ ದಮನಿತ ವರ್ಗಗಳ ಆಶಾಕಿರಣವಾದ ಎಸ್.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ರಾಷ್ಟ್ರೀಯ ನಾಯಕರಾದ ಜನಾಬ್ ರಿಯಾಝ್ ಫರಂಗಿಪೇಟೆಯವರ ಸಮ್ಮುಖದಲ್ಲಿ ತನ್ನ ಅಪಾರ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಜನಾಬ್ ಯೂಸುಫ್ ಆಲಡ್ಕ ಹಾಗೂ ಮತ್ತಿತರ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

Share this on:
error: Content is protected !!