Latest Posts

ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ನೌಶಾದ್ ಮಲಾರ್ ಆಯ್ಕೆ

ಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ಯುವ ಘಟಕವಾದ ಮುಸ್ಲಿಂ ಯೂತ್ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ನೂತನ ಸಮಿತಿ ರಚನೆ ಹಾಗೂ ಪಾಣಕ್ಕಾಡ್ ಸಯ್ಯಿದ್ ಮುಹಮ್ಮದಲೀ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷರಾದ ನೌಶಾದ್ ಮಲಾರ್ ಅವರ ಅಧ್ಯಕ್ಷತೆಯಲ್ಲಿ ಮೆಲ್ಕಾರ್ ನಲ್ಲಿರುವ ಬಿರ್ವ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮುಸ್ಲಿಂ ಲೀಗ್ ಅಡ್ಹಾಖ್ ಸಮಿತಿ ಅಧ್ಯಕ್ಷರಾದ ಅಡ್ವಕೇಟ್ ಸುಲೈಮಾನ್ ಮಂಗಳೂರು ಅವರು ಉದ್ಘಾಟಿಸಿದರು. ಎಸ್.ಇ ಕರೀಮ್ ಕಡಬ , ಸಿದ್ಧೀಖ್ ಅಬ್ದುಲ್ ಖಾದರ್ ಬಂಟ್ವಾಳ , ಇಸ್ಮಾಯಿಲ್ ಮಂಗಳೂರು , ರಶೀದ್ ಹಾಜಿ ಪರ್ಲಡ್ಕ , ಲತೀಫ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಬ್ಬಾರ್ ಮೌಲವಿ ಕರಾಯ ಅನುಸ್ಮರಣಾ ಭಾಷಣಗೈದರು.ನಂತರ ನೂತನ ಸಮಿತಿ ರಚಿಸಲಾಯಿತು

ಮುಸ್ಲಿಂ ಲೀಗ್ ಅಡ್ಹಾಖ್ ಸಮಿತಿ ಅಧ್ಯಕ್ಷರಾದ ಅಡ್ವಕೇಟ್ ಸುಲೈಮಾನ್ ಮಂಗಳೂರು ಅವರು ಉದ್ಘಾಟಿಸಿದರು.

. ಅಧ್ಯಕ್ಷರಾಗಿ ನೌಶಾದ್ ಮಲಾರ್ , ಪ್ರಧಾನ ಕಾರ್ಯದರ್ಶಿಯಾಗಿ ಇಶ್ರಾರ್ ಗೂಡಿನಬಳಿ , ಕೋಶಾಧಿಕಾರಿಯಾಗಿ ಲತೀಫ್ ಕಣ್ಣೂರು ಅವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶಬೀರ್ ಅಝ್ಹರಿ ಪಾಂಡವರಕಲ್ಲು , ನೌಫಲ್ ಅಜ್ಜಿಕಲ್ಲು , ಸಿದ್ಧೀಖ್ ಕೊರಂದೂರು ಕಡಬ , ಫಾರೂಖ್ ಮೂಡಬಿದ್ರೆ, ಕಾರ್ಯದರ್ಶಿಯಾಗಿ ನವಾಝ್ ಮಾಸ್ಟರ್ ಕಟ್ಟದಪಡ್ಪು , ಝುಬೈರ್ ತೋಡಾರು , ಹಂಝ ಗಡಿಯಾರ ಹಾಗೂ ಫಾರೂಖ್ ಕಣ್ಣೂರು ನೇಮಕಗೊಂಡರು. ಜತೆ ಕಾರ್ಯದರ್ಶಿಗಳಾಗಿ ಉಸ್ಮಾನ್ ಸಾಗ್ ಹಳೆಯಂಗಡಿ , ಜಬ್ಬಾರ್ ಮೌಲವಿ ಮುನೀರ್ ಆತೂರು , ಮುಸ್ತಫಾ ರೆಂಜಲಾಡಿ , ಅಥಾವುಲ್ಲಾಹ್ ಕಣ್ಣೂರು , ಖಾದರ್ ಬಂಗೇರುಕಟ್ಟೆ ಹಾಗೂ ಝೋನಲ್ ಸೆಕ್ರೆಟರಿಯಾಗಿ ಇಸ್ಹಾಖ್ ಕೌಸರಿ ಪರ್ಲೊಟ್ಟು , ತ್ವಯ್ಯಿಬ್ ಫೈಝಿ ಬೊಳ್ಳೂರು , ಅಝರ್ ಬೆಳ್ಳಾರೆ , ಯು.ಪಿ ಬಶೀರ್ ಬೆಳ್ಳಾರೆ , ಹನೀಫ್ ಮಾಪಾಲ್ , ಉವೈಸ್ ತೋಕೆ , ಹನೀಫ್ ಯಾದ್ ಮಲಾರ್ ಇವರನ್ನು ನೇಮಿಸಲಾಯಿತು. ಖಾದರ್ ಜಪ್ಪು , ಇಸ್ಮಾಯಿಲ್ ಟಿ.ಯು ಬಿ.ಸಿ‌ ರೋಡ್ , ಜಮಾಲ್ ಬಾರ್ಲಿ ಉಳ್ಳಾಲ , ಇಬ್ರಾಹಿಂ ಹಾಜಿ ಬೆಂಗರೆ , ಬಶೀರ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
ಶಬೀರ್ ಅಝ್ಹರಿ ಪಾಂಡವರಕಲ್ಲು ಸ್ವಾಗತಿಸಿ , ವಂದಿಸಿದರು.

Share this on:
error: Content is protected !!