Latest Posts

ಗಿಡ ನೆಡುವ ಮೂಲಕ ಜನ್ಮದಿನಾಚರಿಸೋಣ ನೂತನ ಪದ್ದತಿಗೆ ಶಮ್ಸ್ ವತಿಯಿಂದ ಚಾಲನೆ

ಪ್ರತಿಯೊಂದು ವ್ಯಕ್ತಿಗೂ ವರ್ಷದಲ್ಲೊಂದದು ಹಬ್ಬವಿದೆ, ಅದು ಆತನ ಹುಟ್ಟು ಹಬ್ಬ. ಈ ಹಬ್ಬವನ್ನು ಬಹಳಷ್ಟು ಅಂದವಾಗಿ ಆಚರಿಸಲೇ ಎಲ್ಲರೂ ಬಯಸುವುದು. ಇಂದು ಈ ಆಚರಣೆಯು ತಿನ್ನುವ ಅನ್ನವ ತುಳಿದು, ಕೇವಲ ಅಭಿಮಾನ ಅಂತಸ್ತಿಗಾಗಿ ಲಕ್ಷಗಟ್ಟಲೆ ಪೋಲುಮಾಡುತ್ತಿರುವಾಗ, ತಾನು ಬದುಕುವ ಭೂಮಿಯಲ್ಲಿ ತನಗೆ ಪ್ರತಿಫಲ ರಹಿತ ಆಮ್ಲಜನಕ ನೀಡುತ್ತಿರುವ ಪ್ರಕೃತಿಗೆ ತನ್ನದೊಂದು ಕೈ ಸೇವೆ ಎಂಬAತೆ ಪರಿಣಾಮಕಾರಿ ಮತ್ತು ಸಮಾಜಕ್ಕೆ ಮಾದರಿಯಂತೆ ಗಿಡ ನೆಟ್ಟು ಹುಟ್ಟು ಹಬ್ಬವನ್ನು ಆಚರಿಸೋಣ. ಇದಕ್ಕಾಗಿ ತೊಡಾರು ಶಂಸುಲ್ ಉಲಮಾ ಅರಬಿಜ್ ಕಾಲೇಜಿನ ವಿದ್ಯಾರ್ಥಿ ಸಂಘಟನೆ “ಶಮ್ಸ್” ‘ನೆರಳು ನನ್ನಿಂದ’ ಎಂಬ ಶೀರ್ಷಿಕೆಡಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಹುಟ್ಟು ಹಬ್ಬದಂದು ಒಂದು ಗಿಡ ನೆಡುವ ಮೂಲಕ ಮಾದರಿ ಹುಟ್ಟು ಹಬ್ಬವನ್ನು ಆಚರಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Share this on:
error: Content is protected !!