Latest Posts

127 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ : ಮುಸ್ಲಿಂ ಲೀಗ್ ದ.ಕ ಜಿಲ್ಲಾ

ಮಂಗಳೂರು : ಇತರೆ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಕ್ಕೆ ಮರಳಿಸುವ 127 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಸಮಿತಿಯು ಸ್ವಾಗತಿಸುವುದಾಗಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ನ್ಯಾಯವಾದಿ ಎಸ್ . ಸುಲೈಮಾನ್‌ರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ . ಹಿಂದುಳಿದ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಮೋದಿ ಸರಕಾರವು 2018 ರಲ್ಲಿ 102 ನೇ ಸಂವಿಧಾನ ತಿದ್ದುಪಡಿ ಮೂಲಕ ರಾಜ್ಯಗಳ ಕೈಯಿಂದ ಕಸಿದುಕೊಂಡಿತ್ತು . ಮೋದಿ ಸರಕಾರವು ಕಳೆದ 7 ವರುಷಗಳಲ್ಲಿ ಕೈಗೊಂಡ ಹಿಮಾಲಯದಷ್ಟು ದೊಡ್ಡ ಹಲವಾರು ಮೂರ್ಖತನದ ನಿರ್ಧಾರಗಳನ್ನು ಇದೇ ರೀತಿ ತಿದ್ದುವ ತೀರ್ಮಾನಗಳನ್ನು ಮಾಡಿ ದೇಶದ ಜನತೆಯ ನೆಮ್ಮದಿಗೆ ದಾರಿ ಮಾಡಿಕೊಟ್ಟಿತೆಂದು ಆಶಿಸುವುದಾಗಿ ಅವರು ಹೇಳಿದರು . ಪ್ರತಿರಾಜ್ಯಗಳಲ್ಲೂ ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಿ ಆಯಾ ರಾಜ್ಯಗಳಲ್ಲಿ ವೈಜ್ಞಾನಿಕವಾಗಿ ಹಿಂದುಳಿದ ಜನಾಂಗಗಳನ್ನು ಗುರುತಿಸುವ ಕೆಲಸವು ನಿರಂತರವಾಗಿ ನಡೆದು ನೈಜ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕೆಂದು ಅವರು ಆಗ್ರಹಿಸಿದರು . ಕರ್ನಾಟಕ ರಾಜ್ಯದಲ್ಲಿ ಸರಕಾರವು ಕೋಟ್ಯಾಂತರ ಮೊತ್ತ ವ್ಯಯಿಸಿ ನಡೆಸಿದ ಜಾತೀವಾರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ ಸುಲೈಮಾನ್‌ರವರು ಈ ಸಮೀಕ್ಷೆಯಂತೆ ಅರ್ಹ ಪ್ರಾಧಿನಿತ್ಯ ಲಭ್ಯವಾಗದ ಸಮುದಾಯದವರಿಗೆ ಪ್ರತ್ಯೇಕ ನೇಮಕಾತಿ ಮೂಲಕ ಪ್ರಾಧಿನಿತ್ಯವನ್ನು ಕಲ್ಪಿಸಿಕೊಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿತು .

Share this on:
error: Content is protected !!