ಶೀಘ್ರ ಕ್ರಮ ಕೈಗೊಳ್ಳದೆ ಹೋದಲ್ಲಿ ಹೋರಾಟದ ಎಚ್ಚರಿಕೆ..!
ಉಳ್ಳಾಲ: ಕಳೆದ ಕೆಲ ದಿನಗಳಿಂದ ಉಳ್ಳಾಲ ಪ್ರದೇಶವನ್ನು ಗುರಿಯಾಗಿಸಿಕೊಂಡು ಬೇಕಾಬಿಟ್ಟಿ ನಾಲಿಗೆ ಹರಿಬಿಡುತ್ತಿರುವ ಶರಣ್ ಪಂಪ್ವೆಲ್ ಹಾಗೂ ಮತ್ತವನ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂದು ಉಳ್ಳಾಲ ಠಾಣಾಧಿಕಾರಿಗಳಿಗೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಚಾಲಕರಾದ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಲಾಯಿತು.
ಈ ಸಂಧರ್ಭದಲ್ಲಿ ಮೋನಾಕ ಕೋಟೆಪುರ, ಅಬ್ದುಲ್ ರಹಮಾನ್ ಮೇಲಂಗಡಿ, ನಝೀರ್ ಕೋಡಿ, ನಝೀರ್ ಬಾರ್ಲಿ ಹಾಗೂ ರಫೀಕ್ ಮೇಲಂಗಡಿ ಅವರು ಉಪಸ್ಥಿತರಿದ್ದರು.
