Latest Posts

ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ SKSSF ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಬೆಳಿಗ್ಗೆ 7:30ಕ್ಕೆ ಸರಿಯಾಗಿ ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಬೊಳ್ಳೂರು ಇದರ ಮುಂಭಾಗದಲ್ಲಿ ಜರುಗಿತು.
ಕಾರ್ಯಕ್ರಮದ ನೇತೃತ್ವವನ್ನು ಅಲ್ ಹಾಜ್ ಮುಹಮ್ಮದ್ ಅಝ್.ಹರ್ ಪೈಝಿ ಬೊಳ್ಳೂರು ವಹಿಸಿ ದ್ವಜಾರೋಹಣ ಗೈದರು,. ಜಿ.ಎಮ್ ಹನೀಫ್ ದಾರಿಮಿ ಇಂದಿರಾನಗರ ಮುಖ್ಯ ಪ್ರಭಾಷಣ ನಡೆಸಿದರು,ಪ್ರೀಡಂ ಸ್ಕ್ವಾರ್ ಪ್ರತಿಜ್ಞೆಯನ್ನು ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಪ್ರಧಾನ ಕಾರ್ಯದರ್ಶಿ ಝೈನುದ್ದಿನ್ ರೈಲ್ವೆ ಬೋಧಿಸಿದರು,ಸಿರಾಜುದ್ದೀನ್ ಫೈಝಿ ಬೊಳ್ಳೂರು ಅತೀಥಿಗಳನ್ನು ಸ್ವಾಗತಿಸಿದರು,

ಈ ಸಂದರ್ಭ ಬೊಳ್ಳೂರು ಮಸೀದಿ ಅಧ್ಯಕ್ಷ ಹಾಜಿ ಎ.ಕೆ ಜೀಲಾನಿ,ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಸುಲೈಮಾನ್ ಕೊಪ್ಪಲ,ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅಧ್ಯಕ್ಷ ಯಯ್ಯಾ ಪರಂಗಿಬೊಟ್ಟು,ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಬೊಳ್ಳೂರು ಅಧ್ಯಕ್ಷ ಬಿ.ಇ ಮಹಮ್ಮದ್,ಸಮಸ್ತ ಜಂಇಯ್ಯತುಲ್ ಮುಹಲ್ಲಿಮೀನ್ ಸುರತ್ಕಲ್ ರೇಂಜ್ ಕೋಶಾಧಿಕಾರಿ ಬಿ.ಎಂ ಇಬ್ರಾಹಿಮ್,ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, ಲಿಯಾವುಲ್ ಇಸ್ಲಾಂ ಧಪ್ ಕಮೀಟಿ ಅಧ್ಯಕ್ಷ ಉಮರುಲ್ ಪಾರೂಕ್,ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಅಧ್ಯಕ್ಷ ಅಲ್ಪಾಝ್ ಬೊಳ್ಳೂರು,ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ ಸೇರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು ಎಂದು ತ್ವಯ್ಯಿಬ್ ಫೈಝಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Share this on:
error: Content is protected !!